ಕರೊನಾ ಎಂದು ಆಸ್ಪತ್ರೆ ಸೇರಿದ ವೃದ್ಧನ ಸಂಶಯಾಸ್ಪದ ಸಾವು; ಶವದ ತಲೆಯಿಂದ ಒಸರಿದ ರಕ್ತ ನೋಡಿ ಕುಟುಂಬ ಕಂಗಾಲು

sirsi
Published on

ಉತ್ತರಕನ್ನಡ: ಕರೊನಾ ಶಂಕೆಯೊಂದಿಗೆ ಆಸ್ಪತ್ರೆ ಸೇರಿದ ವೃದ್ಧ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಥ ಘಟನೆ ನಡೆದಿದೆ. ಮಂಜುನಾಥ ದ್ಯಾವ ಮಡಿವಾಳ (70) ಅವರಿಗೆ ಮಂಗಳವಾರ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಕೆಲ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದಾರೆ. ಶವವನ್ನು ಸಾಗಿಸಲು ಆಸ್ಪತ್ರೆಯವರು ಆ್ಯಂಬುಲೆನ್ಸ್​ ವ್ಯವಸ್ಥೆಯನ್ನೂ ಮಾಡಿಕೊಡದ ಹಿನ್ನೆಲೆಯಲ್ಲಿ ಖಾಸಗಿ ವಾಹನದಲ್ಲಿ ಶವವನ್ನು ವಾಪಾಸು ತರಲಾಗಿದೆ.

ವೃದ್ಧನ ಶವವನ್ನು ಅಂತ್ಯಸಂಸ್ಕಾರ ಮಾಡಲು ರುಧ್ರಭೂಮಿಗೆ ತಂದ ವೇಳೆ ಕುಟುಂಬಸ್ಥರಿಗೆ ಶಾಕ್​ ಆಗಿದೆ. ಪ್ಲಾಸ್ಟಿಕ್​ ಚೀಲದೊಳಗಿದ್ದ ಶವದ ತಲೆಯಿಂದ ಭಾರೀ ಪ್ರಮಾಣದ ರಕ್ತ ಒಸರಿರುವುದು ಬೆಳಕಿಗೆ ಬಂದಿದೆ. ಒಂದು ವೇಳೆ ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ರಕ್ತ ಬರುವುದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ವ್ಯಕ್ತವಾಗಿದೆ. ಆದರೆ ಆಸ್ಪತ್ರೆಯವರು ವೃದ್ಧನ ಸಾವಿಗೆ ಯಾವುದೇ ಕಾರಣವನ್ನು ಕೊಟ್ಟಿಲ್ಲ ಎನ್ನಲಾಗಿದೆ. ರುಧ್ರಭೂಮಿಯಲ್ಲಿ ವೃದ್ಧನ ಶವದ ತಲೆಯಿಂದ ರಕ್ತ ಒಸರುತ್ತಿದ್ದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net