ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ವಿಶ್ವನಾಥ್

Bel_SDM Principal
Published on

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಹಿರಿಯ ಅಧ್ಯಾಪಕ ಡಾ.ವಿಶ್ವನಾಥ ಪಿ.ನೇಮಕಗೊಂಡಿದ್ದಾರೆ. ಡಾ.ಕುಮಾರ ಹೆಗ್ಡೆ ನಿವೃತ್ತಿಯಿಂದ ತೆರವಾಗಿದ್ದ ಪ್ರಾಂಶುಪಾಲರ ಹುದ್ದೆಗೆ ವಿಶ್ವನಾಥ ಅವರು ಆಯ್ಕೆಯಾಗಿದ್ದಾರೆ.

34 ವರ್ಷಗಳ ಬೋಧನಾ ಅನುಭವವುಳ್ಳ ವಿಶ್ವನಾಥ ಅವರು ಕಳೆದ ಐದು ವರ್ಷಗಳಿಂದ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಪೂರೈಸಿ 1990ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಷಯದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.

ನವದೆಹಲಿಯ ಯುಜಿಸಿಯ ಫ್ಯಾಕಲ್ಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಂನ ಭಾಗವಾಗಿ ಅವರು ಹೀಟರಾಸೈಕ್ಲಿಕ್ ಕೆಮಿಸ್ಟ್ರಿ ವಲಯದಲ್ಲಿ ನಡೆಸಿದ ಸಂಶೋಧನಾ ಅಧ್ಯಯನಕ್ಕೆ 1999ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net