

ಕಡಬ: ಸರ್ಕಾರಿ ನೌಕರರ ಸಂಘ ಕಡಬ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಡಬ ಮೆಡಿಕಲ್ ಹೆಲ್ತ್ಸೆಂಟರ್ನಲ್ಲಿ ಇತ್ತೀಚೆಗೆ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನಕುಮಾರ್ ಉದ್ಘಾಟಿಸಿ ಶುಭಹಾರೈಸಿದರು. ಕಡಬ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲತೇಶ್, ಜಿಲ್ಲಾ ರಾಜ್ಯ ಪರಿಷತ್ ಸದಸ್ಯ ಅಂಬರೀಶ್ ಹಾಗೂ ಕಡಬ ಮೆಡಿಕಲ್ ಹೆಲ್ತ್ ಸೆಂಟರ್ನ ಮುಖ್ಯಸ್ಥ ಲಿನ್ಸಿ ಹಾಗೂ ವೈದ್ಯಾಧಿಕಾರಿ ಡಾ.ರಕ್ಷಿತ್, ಪ್ರಕಾಶ್ ಬಾಕಿಲ ಉಪಸ್ಥಿತರಿದ್ದರು. ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯಪರಿಷತ್ ಸದಸ್ಯ ಯಶ್ರಾಜ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಶ್ರೀಲತಾ ವಂದಿಸಿದರು. ತಾಲೂಕು ಸಂಘದ ಕಾರ್ಯದರ್ಶಿ ಗೋವಿಂದನಾಯಕ್ ಕಾರ್ಯಕ್ರಮ ನಿರೂಪಿಸಿದರು.
*ಸಮಾರೋಪ ಸಮಾರಂಭ: ಸರ್ಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಕಡಬ ಮೆಡಿಕಲ್ ಸೆಂಟರ್ನ ಮುಖ್ಯಸ್ಥೆ ಲಿನ್ಸಿ ಹಾಗೂ ಸಂಘದ ಉಪಾಧ್ಯಕ್ಷ ಯೋಗೀಶ್, ಹೇಮಲತಾ ಪ್ರದೀಪ್, ಕಾರ್ಯದರ್ಶಿ ಗೋವಿಂದನಾಯ್ಕ ಉಪಸ್ಥಿತರಿದ್ದರು. ಸಹಕಾರ ನೀಡಿದ ಲಿನ್ಸಿ, ಶೈಲಾ, ಪರಹಾನ್, ಕವಿತ, ನಶಿಬ, ದಿಸ್ವಿತಾ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಯೋಗೀಶ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಕುಶಾಲಪ್ಪ ವಂದಿಸಿದರು. ಕಾಯದರ್ಶಿ ಗೋವಿಂದನಾಯ್ಕ ನಿರೂಪಿಸಿದರು.