ಕಣ್ಣಿಗೆ ಬಟ್ಟೆ ಕಟ್ಟಿ ಬರೆಯುವ ಚಿತ್ರ ಬಿಡಿಸುವ ತರಬೇತಿ

Sub_Blindfold
Published on

ಸುಬ್ರಹ್ಮಣ್ಯ: ಕಣ್ಣುಗಳ ಸಹಾಯವಿಲ್ಲದೆ ಬಣ್ಣ, ಚಿತ್ರ, ವಸ್ತು, ಬರಹ ಇತ್ಯಾದಿಗಳನ್ನು ಗುರುತಿಸುವ ಜ್ಞಾನ ನೀಡುವ ಗಾಂಧಾರಿ ವಿದ್ಯೆ ತರಬೇತಿ ಶಿಬಿರವು ಬಿಳಿನೆಲೆ ಕೈಕಂಬ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ, ಸಂಸ್ಕಾರ ಮತ್ತು ಶ್ರದ್ಧಾ ಫಲಗಳಿಂದ ತಮ್ಮ ಮನೋಶಕ್ತಿ ಉದ್ಧೀಪನಗೊಳಿಸುವ ಮೂಲಕ ಗಾಂಧಾರಿ ಶಿಕ್ಷಣ ನೀಡಲಾಯಿತು. ಮಂಗಳೂರಿನ ಶ್ರೀ ಗೋಕುಲ ಧಾಮ ಹಾಗೂ ಮೈಂಡ್ ಮಿರಕಲ್ಸ್‌ನ ಮುಖ್ಯಸ್ಥೆ ರೂಪಶ್ರೀ ಜಿ.ಗುದಂಡ ಮತ್ತು ಕೃಷ್ಣರಾಜ ಕೊಟ್ಟಾರ ತರಬೇತಿ ನೀಡಿದರು. ಕಣ್ಣಿಗೆ ಬಟ್ಟೆ ಕಟ್ಟಿ ವಸ್ತುಗಳನ್ನು ಗುರುತಿಸುವ ಕಲೆ ರೂಪಶ್ರೀ ಕಲಿಸಿದರು.

ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಅತ್ಯಾಡಿ ತರಬೇತಿಗೆ ಚಾಲನೆ ನೀಡಿದರು. ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ ನಡುತೋಟ, ಶಾಲಾ ಮುಖ್ಯಶಿಕ್ಷಕಿ ಪವಿತ್ರಾ ಎ., ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net