ಆತಂಕ ಮೂಡಿಸಿದೆ ಡಬಲ್ ಮ್ಯೂಟೆಂಟ್ ವೈರಸ್!; ರಾಜ್ಯದಲ್ಲಿ 20 ಮಂದಿಯಲ್ಲಿ ಸೋಂಕು ದೃಢ..

CORONA
Published on

ಬೆಂಗಳೂರು: ಕರೊನಾ ಎರಡನೆಯ ಅಲೆಯೇ ಭಯಾನಕವಾಗಿದೆ ಎಂದು ಜನರು ಅಂದುಕೊಳ್ಳುತ್ತಿರುವಾಗ ಇದೀಗ ಸಾರ್ವಜನಿಕರಲ್ಲಿ ಕರೊನಾ ಆತಂಕವನ್ನು ಮತ್ತಷ್ಟು ಹೆಚ್ಚಿಸುವ ಮತ್ತೊಂದು ವಿಷಯ ಹೊರಬಿದ್ದಿದೆ. ಆ ಆತಂಕಕಾರಿ ವೈರಸ್‌ ಇದೀಗ ರಾಜ್ಯದಲ್ಲೇ 20 ಮಂದಿಯಲ್ಲಿ ಕಾಣಿಸಿಕೊಂಡಿರುವುದೇ ಕೋವಿಡ್‌ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ರಾಜ್ಯದಲ್ಲಿ ಈಗ ಎರಡು ಸಲ ರೂಪಾಂತರಗೊಂಡಿರುವ ಅರ್ಥಾತ್‌ ಡಬಲ್‌ ಮ್ಯೂಟೆಂಟ್‌/ಬಿ.1.617 ವೈರಸ್‌ ಪತ್ತೆಯಾಗಿದೆ. ಈಗಾಗಲೇ ಸೋಂಕಿತ 20 ಮಂದಿಯಲ್ಲಿ ಈ ವೈರಸ್‌ ಇರುವುದು ಖಚಿತ ಪಟ್ಟಿದ್ದು, ಇನ್ನಷ್ಟು ಮಂದಿಯಲ್ಲಿ ಇದು ಕಂಡುಬಂದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

ಈವರೆಗೂ ಯುಕೆಯಿಂದ ಆಗಮಿಸಿದ ಹಾಗೂ ಅವರ ಸಂಪರ್ಕಕ್ಕೆ ಬಂದವರು ಸೇರಿ 46 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿತ್ತು. ಬಳಿಕ ಆರು ಜನರಲ್ಲಿ ದಕ್ಷಿಣ ಆಫ್ರಿಕ ವೈರಸ್ ದೃಢಪಟ್ಟಿತ್ತು. ಇದೀಗ ಏಕಾಏಕಿ 20 ಮಂದಿಯಲ್ಲಿ ಎರಡು ಬಾರಿ ರೂಪಾಂತರ ಹೊಂದಿರುವ (ಡಬಲ್ ಮ್ಯೂಟೆಂಟ್ /ಬಿ.1.617) ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net