More

    ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಬಿದ್ದು ಮೃತಪಟ್ಟ ಸೋಂಕಿತೆ; ಸಾವಿನ ಸುದ್ದಿ ಕೇಳಿ ಬೀದಿಯಲ್ಲೇ ಮೂರ್ಛೆ ಹೋದ ಮಗಳು!

    ಕೋಲಾರ: ಕರೊನಾ ಹಾವಳಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಅವ್ಯವಸ್ಥೆಯನ್ನು ಅನಾವರಣ ಮಾಡುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಕರುಣಾಜನಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಂಗಳವಾರವೂ ಅಂಥದ್ದೇ ಒಂದು ಹೃದಯಕಲಕುವ ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತ ತಾಯಿಯ ಸಾವಿನ ಸುದ್ದಿ ಕೇಳಿ ಪರಿತಪಿಸಿದ ಮಗಳು ಬೀದಿಯಲ್ಲೇ ಮೂರ್ಛೆ ಹೋಗಿದ್ದಾಳೆ.

    ಕೋಲಾರ ಜಿಲ್ಲೆ ಕೆಜಿಎಫ್‌ ಸರ್ಕಾರಿ ಆಸತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಕರೊನಾ ಸೋಂಕಿಗೆ ಒಳಗಾಗಿರುವ 55 ವರ್ಷದ ಮಹಿಳೆಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಆಕೆ ಆಸ್ಪತ್ರೆಯ ಶೌಚಗೃಹಕ್ಕೆ ತೆರಳಿದ್ದಾಗ ಜಾರಿಬಿದ್ದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮಾರಿಕುಪ್ಪಂ ಮೂಲದ ಈ ಸೋಂಕಿತೆಯ ಆರೈಕೆಯನ್ನು ಆಸ್ಪತ್ರೆಯಲ್ಲಿ ಯಾರೂ ಸರಿಯಾಗಿ ಮಾಡಿಲ್ಲ. ಮಾತ್ರವಲ್ಲ ಸೋಂಕಿತೆಯ ಶವವನ್ನು ಟಾಯ್ಲೆಟ್‌ ಪಕ್ಕದಲ್ಲೇ ಇರಿಸಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ತಾಯಿಯ ಸಾವಿನ ಸುದ್ದಿಯನ್ನು ಕೇಳಿ ಆಘಾತಕ್ಕೆ ಒಳಗಾದ ಪುತ್ರಿ, ಬೆಳಗ್ಗೆ ಚೆನ್ನಾಗಿಯೇ ಇದ್ದ ನನ್ನ ತಾಯಿ ಈಗ ಇಲ್ಲವಾಗಿದ್ದಾರೆ ಎಂದು ಕಣ್ಣೀರ್ಗರೆದು ಆಸ್ಪತ್ರೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ತಾಯಿಯ ಶವವನ್ನು ಶೌಚಗೃಹ ಪಕ್ಕ ಇರಿಸಿದ್ದಕ್ಕೆ ಹಿಡಿಶಾಪ ಹಾಕಿದ ಪುತ್ರಿ, ಅಮ್ಮನ ಅಗಲಿಕೆಯ ನೋವಿನಿಂದ ದುಃಖಿತಳಾಗಿ ರಸ್ತೆಯಲ್ಲಿ ಒದ್ದಾಡಿ ಮೂರ್ಛೆ ಹೋದ ಪ್ರಸಂಗವೂ ಸೃಷ್ಟಿಯಾಗಿತ್ತು. ದುರವಸ್ಥೆಯ ವಿರುದ್ಧ ಸ್ಥಳದಲ್ಲಿ ನೆರೆದಿದ್ದವರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು.. 

    ನಟ ಕೋಮಲ್​ಗೂ ಕಾಡಿತ್ತು ಕರೊನಾ! ತಮ್ಮ ಉಳಿಯೋದಕ್ಕೆ ಕಾರಣ ಬಿಚ್ಚಿಟ್ಟ ಜಗ್ಗೇಶ್​

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts