More

    ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು!; ಈ ಕಳ್ಳ ‘ಚಪಾತಿ-ಮೀನು’ಗಳಿಗೆ ಇದೇ ನಿಸೂರು..!!!

    ಬೆಂಗಳೂರು: ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು. ಏಕೆಂದರೆ ಇದನ್ನೇ ಗಮನಿಸಿ ಮನೆಗಳ್ಳತನಕ್ಕೆ ಇಳಿಯುವ ಕಳ್ಳರಿದ್ದಾರೆ. ಕಳ್ಳರಾದರೂ ಯಾರೂ ಅಂತೀರಾ? ಚಪಾತಿ-ಮೀನು!!!
    ಹೌದು.. ಎದುರುಗಡೆ ಪೇಪರ್ ಬಿದ್ದಿರುವುದು, ಕಸ ಗುಡಿಸದೆ, ರಂಗೋಲಿ ಬಿಡಿಸದೆ ಇರುವ ಮನೆಗಳ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಮೂವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಯೋಗೇಶ್ ಅಲಿಯಾಸ್ ಚಪಾತಿ (24), ಎಲೆಕ್ಟ್ರಾನಿಕ್ ಸಿಟಿಯ ಯಶವಂತ ಅಲಿಯಾಸ್ ಮೀನು (22) ಮತ್ತು ಬನಶಂಕರಿಯ ಮೋಹನ ಕುಮಾರ್ (29) ಬಂಧಿತರು.

    ಕದ್ದ ಆಭರಣ ಮಾರಾಟಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಟಿ.ಎಂ. ಶಿವಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪರಾಧ ಪ್ರಕರಣ ಬೆಳಕಿಗೆ ಬಂದಿವೆ. ಬಂಧಿತರಿಂದ 44.50 ಲಕ್ಷ ರೂ. ಮೌಲ್ಯದ 921 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಗೇಶ್, ಯಶವಂತ ಮತ್ತು ಮೋಹನ್ ಸ್ನೇಹಿತರಾಗಿದ್ದು, ಒಟ್ಟಿಗೆ ನಗರದ ವಿವಿಧೆಡೆ ಮನೆ ಕಳ್ಳತನ ಮಾಡುತ್ತಿದ್ದರು. ಮನೆ ಮುಂದೆ ಪೇಪರ್, ಕಸ ಬಿದ್ದಿರುವುದನ್ನು ಗಮನಿಸುತ್ತಿದ್ದರು. ಅಲ್ಲದೆ, ರಂಗೋಲಿ ಬಿಡಿಸದೆ ತುಂಬ ದಿನವಾಗಿದ್ದಂಥ ಮನೆಗಳ ಮೇಲೆ ನಿಗಾ ವಹಿಸುತ್ತಿದ್ದರು. ಸ್ವಲ್ಪ ಹೊತ್ತು ಯಾರು ಕಾಣದೆ ಇದ್ದರೆ ತಕ್ಷಣ ಬೀಗ ಒಡೆದು ಒಳನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ಪ್ರತಿಯೊಬ್ಬರ ವಿರುದ್ಧ 8ರಿಂದ 10 ಪ್ರಕರಣಗಳು ದಾಖಲಾಗಿವೆ.

    ಈ ಮೂವರು ಕಳ್ಳರು ಹಲವು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದಾರೆ. ಆದರೂ ಹಳೇ ಚಾಳಿ ಬಿಡದೆ ಮನೆ ಕಳ್ಳತನ ಮುಂದುವರಿಸಿದ್ದರು. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ಹೋಗಿ ವಿಲಾಸಿ ಜೀವನ ನಡೆಸುತ್ತಿದ್ದರು. ಜತೆಗೆ ಪಬ್, ಬಾರ್, ಹುಡುಗಿಯರ ಶೋಕಿ ಮಾಡುತ್ತಿದ್ದರು. ಜೇಬಿನಲ್ಲಿ ಹಣ ಖಾಲಿಯಾದ ಮೇಲೆ ಮತ್ತೆ ಕುಕೃತ್ಯಕ್ಕೆ ಇಳಿಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ 

    ಜಾಮೀನು ಕೊಡಿಸುತ್ತಿದ್ದ ಕಳ್ಳರು: ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಜೈಲಿನಲ್ಲಿ ಇರುವ ತಮ್ಮ ಸ್ನೇಹಿತರು ಅಥವಾ ಬೇರೆ ಗ್ಯಾಂಗ್‌ನ ಸದಸ್ಯರಿಗೆ ಜಾಮೀನು ಕೊಡಿಸಲು ಸಹಾಯ ಮಾಡುತ್ತಿದ್ದರು. ಇವರು ಜೈಲಿಗೆ ಹೋದಾಗ ಈ ಹಿಂದೆ ಸಹಾಯ ಪಡೆದಿದ್ದ ಆರೋಪಿಗಳು, ಈ ಮೂವರ ಪರವಾಗಿ ವಕೀಲರಿಗೆ ಶುಲ್ಕ ಕೊಟ್ಟು, ಕೋರ್ಟ್‌ಗೆ ಶ್ಯೂರಿಟಿ ಕೊಟ್ಟು ಬಿಡಿಸುತ್ತಿದ್ದರು.

    ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ ‘ಕಾರಣಪುರುಷ’ ಯಾರಂತ ಕೇಳಿದರೆ ಯಾರೂ ಇಲ್ಲ!

    ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಬಿದ್ದು ಮೃತಪಟ್ಟ ಸೋಂಕಿತೆ; ಸಾವಿನ ಸುದ್ದಿ ಕೇಳಿ ಬೀದಿಯಲ್ಲೇ ಮೂರ್ಛೆ ಹೋದ ಮಗಳು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts