ಕೋವಿಡ್​ಗೆ ಡೋಂಟ್​ ಕೇರ್​! ಕೋಟೆಕಲ್​ ಫಾಲ್ಸ್​ನಲ್ಲಿ ಜಲಕ್ರೀಡೆಗೆ ಮುಗಿಬಿದ್ದ ಜನರು!

faals
Published on

ಬಾಗಲಕೋಟೆ: ರಾಜ್ಯದಲ್ಲಿ ಸೋಂಕು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಸಂಪೂರ್ಣ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಜನರು ಮಾತ್ರ ಕರೊನಾ ಇರುವುದನ್ನೇ ಮರೆತು, ಲಾಕ್​ಡೌನ್​ನಲ್ಲಿ ಮೋಜು ಮಸ್ತಿ ಮಾಡಲಾರಂಭಿಸಿದ್ದಾರೆ. ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಜನರು ಕಿರು ಫಾಲ್ಸ್​ನಲ್ಲಿ ಜಲಕ್ರೀಡೆಯಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಫಾಲ್ಸ್​ನಲ್ಲಿ ಭಾನುವಾರ ಸಾಕಷ್ಟು ಜನ ಸೇರಿ ಜಲಕ್ರೀಡೆ ಆಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದಾಗಿ ಜಲಪಾತದಲ್ಲಿ ನೀರು ಹೆಚ್ಚಿದೆ. ಅದೇ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಊರುಗಳಿಂದ ಜನರು ಜಲಪಾತಕ್ಕೆ ಬರಲಾರಂಭಿಸಿದ್ದಾರೆ. ಅಲ್ಲಿ ಬಟ್ಟೆ ಬಿಚ್ಚಿಕೊಂಡು ಬೇಕಾಬಿಟ್ಟಿ ವರ್ತನೆ ಮಾಡಲಾರಂಭಿಸದ್ದಾರೆ.

ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ ಜನರು ಮಾತ್ರ ಈ ರೀತಿ ಸೋಂಕನ್ನು ಮರೆತಿದ್ದಾರೆ. ಜಲಪಾತಕ್ಕೆ ಬಂದ ಯಾರೊಬ್ಬರೂ ಮಾಸ್ಕ್​ ಧರಸದೆ, ದೈಹಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net