

ಲಂಡನ್: ಯಾರಾದರೂ ಕೋಟ್ಯಂತರ ರೂಪಾಯಿಯ ಮನೆಯನ್ನು ನಿಮಗೆ ಫ್ರೀ ಆಗಿ ಕೊಡುತ್ತಾರೆ ಎಂದರೆ ನೀವು ನಂಬುತ್ತೀರಾ? ಆದರೆ ಈಗ ನಂಬಲೇಬೇಕು. ಆದರೆ ಉಚಿತವಾಗಿ ಮನೆ ಪಡೆಯುವುದಕ್ಕೆ ಒಂದೇ ಒಂದು ಕಂಡೀಷನ್ ಇದೆ.
ನಿಮಗೆ ಉಚಿತವಾಗಿ ನೀಡಲಾಗುವ ಮನೆಯಲ್ಲಿ ಒಂದು ಆಮೆಯಿದೆ. 94 ವರ್ಷದ ಆ ಆಮೆಯನ್ನು ಕೊಂಡುಕೊಂಡೆ ಆ ಮನೆ ನಿಮಗೆ ಗಿಫ್ಟ್. ಅಂದ ಹಾಗೆ ಆ ಆಮೆಯ ಬೆಲೆ ಕೇವಲ 8.54 ಕೋಟಿ ರೂಪಾಯಿ.
94 ವರ್ಷದ ಆಮೆಗೆ ಹರ್ಕುಲಸ್ ಎನ್ನುವ ಹೆಸರಿದೆ. ಸುತ್ತ ಮುತ್ತಲಿನ ಊರಿಗೆಲ್ಲ ಈ ಆಮೆ ಬಹಳ ಫೇಮಸ್ ಅಂತೆ. ಈಗ ಈ ಆಮೆಯನ್ನು ಮಾರಾಟ ಮಾಡಲು ಅದರ ಮಾಲೀಕ ಮುಂದಾಗಿದ್ದಾನೆ. ಅದನ್ನು ಕೊಳ್ಳುವವರಿಗೆ ದೊಡ್ಡ ಮನೆಯನ್ನು ಗಿಫ್ಟ್ ಕೊಡುವುದಾಗಿಯೂ ತಿಳಿಸಲಾಗಿದೆ. ಮೂರು ಮಹಡಿ ಇರುವ ಮನೆಯಲ್ಲಿ ದೊಡ್ಡ ದೊಡ್ಡ ಲಿವಿಂಗ್ ರೂಂಗಳಿವೆ. ನಾಲ್ಕು ರೂಂಗಳಿದ್ದು ಕೂಡು ಕುಟುಂಬ ಕೂಡ ಅರಾಮವಾಗಿ ಬದುಕಬಹುದಾಗಿದೆ.(ಏಜೆನ್ಸೀಸ್)