

ಕಡಬ: ದೀಪಾವಳಿ ಹಬ್ಬದಲ್ಲಿ ಭಾಗವಹಿಸುವುದರ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಕಟ್ಟುಪಾಡುಗಳು, ರೀತಿ-ನೀತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಅಗಳಿ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರ ಚಂದ್ರ ಭಟ್ ಹೇಳಿದರು.
ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ ಆಯೋಜಿಸಿದ ಹದಿನೈದನೇ ವರ್ಷದ ದೀಪಾವಳಿ ಕ್ರೀಡಾಕೂಟದಲ್ಲಿ ಮಾತನಾಡಿದರು.
ಗೆಳೆಯರ ಬಳಗದ ಅಧ್ಯಕ್ಷ ಬಾಲಚಂದ್ರ ಅಬೀರ ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್ಯ, ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಬೆಳಂದೂರು ಗ್ರಾಪಂ ಉಪಾಧ್ಯಕ್ಷ ಜಯಂತ ಅಬೀರ, ಗೌರವಾಧ್ಯಕ್ಷ ಅಶ್ಲೇಷ್ ಮಿಪಾಲು ಉಪಸ್ಥಿತರಿದ್ದರು.
ಜಯಂತ ಅಬೀರ ಸ್ವಾಗತಿಸಿದರು. ಗೌರವ ಸಲಹೆಗಾರ ಪ್ರಮೋದ್ ನೀರಜರಿ ವಂದಿಸಿದರು. ಗೌರವ ಸಲಹೆಗಾರ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭ: ಬೆಳಗ್ಗೆ ಕ್ರೀಡಾಕೂಟವನ್ನು ಶಿವರಾಮ ಉಪಾಧ್ಯಾಯ ಕಲ್ಪಡ ಉದ್ಘಾಟಿಸಿದರು. ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ರೈ ಮಾದೋಡಿ, ಸೇವಾಕರ್ತ ವಿಷ್ಣು ಗೌಡ ಅಬೀರ, ಯೋಜನೆಯ ಬೆಳಂದೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಕಳುವಾಜೆ, ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಗೆಳೆಯರ ಬಳಗದ ಅಧ್ಯಕ್ಷ ಬಾಲಚಂದ್ರ ಅಬೀರ, ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು.