5ರಂದು ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ

Athletics
Published on

ಕೊಕ್ಕರ್ಣೆ: ಕುಡುಬಿ ಸಮಾಜೋದ್ಧಾರಕ ಸಂಘ ಅಲ್ತಾರು ಯಡ್ತಾಡಿ, ಜಿಲ್ಲಾ ಕುಡುಬಿ ಯುವ ಸಂಘಟನೆ ಮತ್ತು ಜಿಲ್ಲಾ ಕುಡುಬಿ ಉಪಸಮಿತಿಗಳ ಆಶ್ರಯದಲ್ಲಿ ಜಿಲ್ಲಾ ಕುಡುಬಿ ಯುವ ಸಂಘಟನೆ ದಶಮಾನೋತ್ಸವ ಅಂಗವಾಗಿ ಕುಡುಬಿ ಸಮಾಜದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಜ.5ರಂದು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲಾ ಮೈದಾನ ಮಂದಾರ್ತಿಯಲ್ಲಿ ಜರುಗಲಿದೆ. ಸಭಾಕಾರ್ಯಕ್ರಮ ಗೌರವಾಧ್ಯಕ್ಷರಾಗಿ ಜಿಲ್ಲಾ ಕುಡುಬಿ ಸಮಾಜೋದ್ಧಾರಕ ಸಂಘ ಅಧ್ಯಕ್ಷ ಪ್ರಭಾಕರ ನಾಯ್ಕ ಕಲ್ಮರ್ಗಿ ಉಪಸ್ಥಿತರಿರುವರು. ಜಿಲ್ಲಾ ಕುಡುಬಿ ಯುವ ಸಂಘಟನೆ ಅಧ್ಯಕ್ಷ ವಿಘ್ನೇಶ ರಂಜಾಲು ಅಧ್ಯಕ್ಷತೆ ವಹಿಸುವರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ ಉದ್ಘಾಟನೆ ನೆರವೇರಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net