ಭರತನಾಟ್ಯ ಪ್ರದರ್ಶನಕ್ಕೆ ಯುಕ್ತಿ ಉಡುಪ ಆಯ್ಕೆ

yukthi
Published on

ಕುಂದಾಪುರ: ಚೆನ್ನೈನ ಕೃಷ್ಣ ಗಾನ ಸಭಾದಲ್ಲಿ ಜ.8ರಂದು ಭರತನಾಟ್ಯ ಪ್ರದರ್ಶಿಸಲು ವಿದುಷಿ ಯುಕ್ತಿ ಉಡುಪ ಬಳ್ಕೂರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ವಿದುಷಿ ಪ್ರವಿತಾ ಅಶೋಕ್, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್, ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ ಹಾಗೂ ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಸಹಕರಿಸಲಿದ್ದಾರೆ. ಅವರು ಕುಂದಾಪುರ ನೃತ್ಯ ವಸಂತ ನಾಟ್ಯಾಲಯ ವಿದುಷಿ ಪ್ರವಿತಾ ಅಶೋಕ್ ಅವರ ಶಿಷ್ಯೆ, ಬಳ್ಕೂರು ರಾಘವ ಉಡುಪ ಹಾಗೂ ಶ್ರೀಕಾಂತಿ ಉಡುಪ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net