ಸಾಮಾಜಿಕ ಕೆಲಸದಿಂದ ಜಾಗತಿಕ ಮನ್ನಣೆ

sahakari
Published on

ಹೆಬ್ರಿ: ಗ್ರಾಮೀಣ ಭಾಗದಲ್ಲಿರುವ ಶಾಂತಿನಿಕೇತನ ಸಂಸ್ಥೆ ತನ್ನ ಸಾಮಾಜಿಕ ಕೆಲಸಗಳ ಮೂಲಕ ಜಾಗತಿಕ ಮನ್ನಣೆ ಪಡೆದಿದೆ. ಸ್ಥಳೀಯವಾಗಿ ಬಡವರಿಗೆ ಸಾಲ ಸೌಲಭ್ಯ ನೀಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಂಘದ ಸಾಮಾಜಿಕ ಕೆಲಸಗಳು ಸಮಾಜಕ್ಕೆ ಮಾದರಿ ಎಂದು ಶಾಂತಿನಿಕೇತನ ಸಹಕಾರಿ ಸದಸ್ಯೆ, ಕುಚ್ಚೂರು ಗ್ರಾಪಂ ಸದಸ್ಯೆ ಸುಜಾತಾ ಶೆಟ್ಟಿ ಹೇಳಿದರು.

ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಕುಡಿಬೈಲ್ ಕುಚ್ಚೂರಿನಲ್ಲಿ ಸಹಕಾರಿ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಿರ್ದೇಶಕ ಕೆ.ಗಣೇಶ್, ಸಿಇಒ ನರೇಂದ್ರ ಎಸ್., ವ್ಯವಸ್ಥಾಪಕಿ ರಾಜೇರ್ಶರೀ, ಸಿಬ್ಬಂದಿ ಪ್ರಸನ್ನ, ಸಹಕಾರಿ ಸದಸ್ಯರಾದ ಕುಡ್ದುನಾಯ್ಕ, ಅಕ್ಕಯ್ಯ, ವನಜ, ಕಲಾವತಿ, ಚಂದ್ರಾವತಿ, ಜಗನ್ನಾಥ್, ವಾರಿಜಾ, ಪೂರ್ಣಿಮಾ, ಸೌಜನ್ಯಾ, ಚೇತನ್ ಇದ್ದರು. ಸಿಇಒ ನರೇಂದ್ರ ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net