ಕ್ರೀಡೆ, ಶೈಕ್ಷಣಿಕ ಸಾಧಕರಾಗಿ ಬೆಳೆಯಲಿ : ತೋಕೂರಿನಲ್ಲಿ ಭಾಸ್ಕರ್ ದೇವಸ್ಯ ಅಭಿಮತ

New Project (25)
Published on

ಮೂಲ್ಕಿ: ಸೇವಾ ಸಂಸ್ಥೆಗಳು ಕೊಡುವ ಸಹಕಾರವನ್ನು ಉಪಯೋಗಿಸಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕ್ರೀಡೆ ಮತ್ತು ಶೈಕ್ಷಣಿಕ ಸಾಧಕರಾಗಿ ಬೆಳೆಯಬೇಕು ಎಂದು ನಿಡ್ಡೋಡಿ ಜ್ಞಾನರತ್ನ ಚಾರಿಟೆಬಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ದೇವಸ್ಯ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ನಡೆದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು. 51 ಮಕ್ಕಳಿಗೆ ವಿದ್ಯಾನಿಧಿ ಹಾಗೂ ವಿಶೇಷ ವಿದ್ಯಾನಿಧಿಯನ್ನು, ಆರ್ಯ ತೋಕೂರು ಮತ್ತು ತೋಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆ ಸಹ ಶಿಕ್ಷಕಿಗೆ ಮಾಸಿಕ ವೇತನ ನಿಧಿಯನ್ನು ವಿತರಿಸಲಾಯಿತು.

ತೋಕೂರು ಯಕ್ಷದೇಗುಲ ಅಧ್ಯಕ್ಷ ದಿನಕರ ಸಾಲ್ಯಾನ್, ಮಾಜಿ ಅಧ್ಯಕ್ಷ ಮೋಹನ್ ಪೂಜಾರಿ, ಯಶೋಧರ ಸಾಲ್ಯಾನ್, ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಸುರೇಖಾ ಕಲ್ಲಾಪು, ಶಾಂತ ಚಂದ್ರಹಾಸ ಶೆಟ್ಟಿಗಾರ್, ಸದಸ್ಯೆಯರಾದ ಶೈಲಾ ನವೀನ್ ಶೆಟ್ಟಿಗಾರ್, ಅರ್ಚನಾ ಮಹೇಶ್, ಪ್ರಮೀಳಾ ಹರೀಶ್ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ವಂದಿಸಿದರು. ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net