ಸ್ವದೇಶಿ ತಂತ್ರಜ್ಞಾನಗಳ ಮಾಹಿತಿ

Published on

ಪುತ್ತೂರು: ಮೊಟ್ಟೆತ್ತಡ್ಕದ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ನವದೆಹಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿವೃತ್ತ ವಲಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಭೇಟಿ ನೀಡಿದರು.

ನಿವೃತ್ತ ವಲಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಎಚ್‌ಎಎಲ್, ಎನ್‌ಎಎಲ್, ಇಸ್ರೋ, ಡಿಆರ್‌ಡಿಒ ಮುಂತಾದ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹೆಲಿಕಾಪ್ಟರ್, ಯುದ್ಧ ವಿಮಾನಗಳು, ಉಪಗ್ರಹಗಳು ಹಾಗೂ ವಿವಿಧ ಸ್ವದೇಶಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು.

ಗೇರು ಸಂಶೋಧನಾ ನಿರ್ದೇಶನಾಲಯ ನಿರ್ದೇಶಕ ಡಾ.ದಿನಕರ ಅಡಿಗ ಮಾತನಾಡಿದರು. ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಯದುಕುಮಾರ್ ಉಪಸ್ಥಿತರಿದ್ದರು. ನಿರ್ದೇಶನಾಲಯದ ವಿಜ್ಞಾನಿ, ತಾಂತ್ರಿಕ ಅಽಕಾರಿ, ಆಡಳಿತ ವಿಭಾಗದವರು ಉಪಸ್ಥಿತರಿದ್ದರು. ಸಂಸ್ಥೆ ಪ್ರಧಾನ ವಿಜ್ಞಾನಿ ಡಾ.ಮೋಹನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net