

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಕಾಸರಗೋಡು ಕ್ಷೇತ್ರದ ಕುಂಬ್ಡಾಜೆ ಗ್ರಾಮ ಪಂಚಾಯಿತಿ, ಮಂಜೇಶ್ವರ ಕ್ಷೇತ್ರದ ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಮತ್ತು ಕಾಞಂಗಾಡು ಕ್ಷೇತ್ರದ ಕೋಡಂಬೆಳ್ಳೂರು ಮತ್ತು ಅಜನೂರು ಗ್ರಾಮ ಪಂಚಾಯಿತಿಗಳಲ್ಲಿ 2021-22ನೇ ಸಾಲಿನಲ್ಲಿ 250 ಹೆಕ್ಟೇರ್ಗಳಷ್ಟು ಕೇರಗ್ರಾಮ ಯೋಜನೆ ಅನುಷ್ಠಾನಗೊಳಿಸಿದ್ದು, 154.98 ಲಕ್ಷ ರೂ. ವೆಚ್ಚ ತಗುಲಿದೆ.
2022-23ರಲ್ಲಿ ಮಂಜೇಶ್ವರ ಮತ್ತು ಮಂಗಲ್ಪಾಡಿ ಪಂಚಾಯಿತಿಗಳು, ಚೆಂಗಳ ಮತ್ತು ಕುಂಬ್ಡಾಜೆ ಪಂಚಾಯಿತಿಗಳು, ಮುಳಿಯಾರ್ ಪಂಚಾಯಿತಿ, ಕಾಞಂಗಾಡು, ಕಿನಾನೂರು ಕರಿಂದಳ, ಕೋಡೋಬೆಳ್ಳೂರು ಮತ್ತು ಅಜನೂರು ಪಂಚಾಯಿತಿಗಳು, ಚೆರ್ವತ್ತೂರು ಪಂಚಾಯಿತಿಗಳಲ್ಲಿ ತಲಾ 100 ಹೆಕ್ಟೇರ್ ಕೇರಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗಿದೆ.
2023-24ರಲ್ಲಿ ಮಂಜೇಶ್ವರದ ಮೀಂಜ, ಮಂಜೇಶ್ವರ, ಮಂಗಲ್ಪಾಡಿ ಪಂಚಾಯಿತಿಗಳು, ಚೆಂಗಳ ಮತ್ತು ಕುಂಬ್ಡಾಜೆ ಪಂಚಾಯಿತಿ, ಮುಳಿಯಾರ್ ಪಂಚಾಯಿತಿ, ಪನತ್ತಡಿ, ಕಾಞಂಗಾಡ್, ಬೇಡಗಂ, ಕಾಸರಗೋಡು ನಗರಸಭೆಯ ತಲಾ 100 ಹೆಕ್ಟೇರ್ನಲ್ಲಿ ಕೇರಗ್ರಾಮ ಯೋಜನೆ ಜಾರಿಗೊಳಿಸಿದ್ದು, 59.35 ಲಕ್ಷಕ ರೂ.ಗೂ ಅಧಿಕ ವ್ಯಯಿಸಲಾಗಿದೆ.
ಕೇರಗ್ರಾಮ ಯೋಜನೆ ಜಾರಿಗೊಳಿಸಿದ್ದರಿಂದ ಮಂಜೇಶ್ವರ ಪಂಚಾಯಿತಿಯು ವಿದ್ಯುತ್ ಡ್ರೈಯರ್ ಯಂತ್ರದ ಮಿಲ್ ಪ್ರಾರಂಭಿಸಿದ್ದು, 120 ಲೀ.ತೆಂಗಿನ ಎಣ್ಣೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಮಂಜೇಶ್ವರ ಪಂಚಾಯಿತಿ ಮೂಲಗಳು ತಿಳಿಸಿವೆ.
ಕಳೆದ ವರ್ಷ 100 ಹೆಕ್ಟೇರ್ಗಳಲ್ಲಿ ಜಾರಿ
2024-25ರಲ್ಲಿ ಪೈವಳಿಕೆ, ಮೀಂಜ, ಮಂಜೇಶ್ವರ, ಚೆಂಗಳ ಪಂಚಾಯಿತಿ, ಮುಳಿಯಾರ್ ಪಂಚಾಯಿತಿ, ಕಳ್ಳಾರ್, ಪನತ್ತಡಿ, ಕಾಞಂಗಾಡ್ ಮತ್ತು ಕಿನಾನೂರು ಕರಿಂದಳ ಪಂಚಾಯಿತಿಗಳು, ನೀಲೇಶ್ವರ ಮತ್ತು ಚೆರ್ವತ್ತೂರು ಪಂಚಾಯಿತಿಗಳಲ್ಲಿ ತಲಾ 100 ಹೆಕ್ಟೇರ್ಗಳಲ್ಲಿ ಕೇರಗ್ರಾಮ ಯೋಜನೆ ಜಾರಿಗೊಳಿಸಿದ್ದು, 14.05 ಲಕ್ಷ ರೂ. ವ್ಯಯಿಸಲಾಗಿದೆ.