

ಪಡುಬಿದ್ರಿ: ಕೆಮುಂಡೇಲಿನ ಧನ್ಯಾ ಆಚಾರ್ಯ ಮುಂಬೈ ಚೆಂಬೂರಿನ ಫೈನ್ ಆರ್ಟ್ಸ್ ಸೊಸೈಟಿಯಲ್ಲಿ ಭರತನಾಟ್ಯದಲ್ಲಿ ವಿಶಾರದ್ ಪೂರ್ಣಗೊಳಿಸಿದ್ದಾರೆ. 7ರ ಹರೆಯದಲ್ಲಿ ಭರತನಾಟ್ಯ ಅಭ್ಯಸಿಸಲು ಆರಂಭಿಸಿದ ಅವರು, ಇದೀಗ 8 ವರ್ಷ ಪೂರ್ಣಗೊಳಿಸಿದ್ದು, ಸೋನಾಲಿ ತಾಂಬೆ ಮಾರ್ಗದರ್ಶನದಲ್ಲಿ ಮುಂಬೈನಲ್ಲಿ ರಂಗೇತ್ರಂ ಪ್ರದರ್ಶಿಸಿದ್ದಾರೆ. ಕೆಮುಂಡೇಲಿನ ಗಾಯತ್ರಿ ಆಚಾರ್ಯ ಮತ್ತು ದಯಾನಂದ ಆಚಾರ್ಯ ದಂಪತಿ ಪುತ್ರಿ ಧನ್ಯಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.