ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳ ಉಪಯೋಗಕ್ಕೆ ಹಾಗೂ ಅವರಿಗೂ ಇತರ ಉನ್ನತ ಶಾಲೆಗಳಲ್ಲಿ ದೊರೆಯುವ ಸೌಕರ್ಯ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ದೊರೆಯಬೇಕನ್ನುವ ಉದ್ದೇಶದಿಂದ ವಿಜ್ಞಾನ ಪ್ರಯೋಗಾಲಯ ಕೊಠಡಿ ನಿರ್ಮಿಸಲಾಗಿದೆ. ಇದರ ಉಪಯೋಗ ಈ ಶಾಲೆ ಮಕ್ಕಳು ಪಡೆಯಬೇಕು ಎಂದು ಕುಂದಾಪುರ ರೋಜರಿ ಮಾತಾ ಚರ್ಚ್ ಪ್ರಧಾನ ಧರ್ಮಗುರು, ಶಾಲಾ ಜಂಟಿ ಕಾರ್ಯದರ್ಶಿ ಸ್ಟಾೃನಿ ತಾವ್ರೊ ಹೇಳಿದರು.
ಕುಂದಾಪುರದ ಸಂತ ಮೇರಿಸ್ ಕನ್ನಡ ಮಾಧ್ಯಮ ಅನುದಾನಿತ ಶಾಲೆಯಲ್ಲಿ ದಾನಿಗಳಾದ ಸಮೀರ್ ಪಿಂಟೊ ಸಹಕಾರದಲ್ಲಿ ನಿರ್ಮಿಸಲಾಗಿರುವ ನೂತನ ಸುಸಜ್ಜಿತ ವಿಜ್ಞಾನ ಪ್ರಯೋಗಲಾಯ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ರೋಜರಿ ಮಾತಾ ಚರ್ಚ್ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನ, ಮುಖ್ಯಶಿಕ್ಷಕಿ ಅಸುಂಪ್ತಾ ಲೋಬೊ, ವಿಜ್ಞಾನ ಶಿಕ್ಷಕಿ ಸ್ಮಿತಾ, ರೋಜರಿ ಮಾತಾ ಚರ್ಚ್ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಡೋರಾ ಲುವಿಸ್, ಸಂತ ಮೇರಿಸ್ ಪಿಯು ಕಾಲೇಜು ಪ್ರಾಂಶುಪಾಲೆ ರೇಷ್ಮಾ ಫರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆ ಮುಖ್ಯಶಿಕ್ಷಕಿ ಶೈಲಾ ಡಿಆಲ್ಮೇಡಾ ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಲಹ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಭಾಸ್ಕರ ಗಾಣಿಗ ವಂದಿಸಿದರು.