ಕೋಟ ಮೂರ್ತೆದಾರರ ಸಹಕಾರಿಗೆ 1.06 ಕೋಟಿ ನಿವ್ವಳ ಲಾಭ

murthe

ಕೋಟ: ಮೂರ್ತೆದಾರರ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 302 ಕೋಟಿ ರೂ. ವ್ಯವಹಾರ ನಡೆಸಿ 1.06 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.12 ಡಿವಿಡೆಂಡನ್ನು ಸಂಘದ ಕೋಟದ ಪ್ರಧಾನ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸಂಘದ 33ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ಘೋಷಿಸಿದರು.

ಸಂಘ ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ- ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯ ವ್ಯಾಪ್ತಿಯಲ್ಲಿ 6 ಬ್ಯಾಕಿಂಗ್ ಶಾಖೆ ಹೊಂದಿದ್ದು, ಶೀಘ್ರ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ಸಂಘ 13124 ಸದಸ್ಯರ ಬಲ ಹೊಂದಿದ್ದು, 1.35 ಕೋಟಿ ರೂ.ಪಾಲು ಬಂಡವಾಳ, 71.32 ಕೋಟಿ ರೂ. ಠೇವಣಿ, 54.04 ಕೋಟಿ ರೂ. ಹೊರಬಾಕಿ ಸಾಲ ಇದ್ದು, ಸಂಘದಿಂದ 27.06 ಕೋಟಿ ರೂ. ವಿವಿಧ ಸಹಕಾರಿ ಸಂಘ ಹಾಗೂ ಬ್ಯಾಂಕ್‌ನಲ್ಲಿ ವಿನಿಯೋಗಿಸಿದೆ. ಹಾಗೂ ವಿವಿಧ ನಿಧಿಗಳು 10.09 ಕೋಟಿ ರೂ. ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 83.29 ಕೋಟಿ ರೂ.ಗೂ ಮೀರಿದೆ. ಸತತ 28 ವರ್ಷಗಳಿಂದ ಎ ತರಗತಿ ಆಡಿಟ್ ವರ್ಗೀಕರಣ ಪಡೆದಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಸಂಘ ಕೋಟದಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಹೊಂದಿದ್ದು, ಸಂಘದ ಸಾಸ್ತಾನ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಸಶಕ್ತೀಕರಣಕ್ಕಾಗಿ 277 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು 6.38 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದೆ ಎಂದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ಸಂಘದ ಉಪಾಧ್ಯಕ್ಷ ಜಯರಾಮ ಪೂಜಾರಿ ಬಾರ್ಕೂರು, ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪಿ.ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ.ಸಂಜೀವ ಪೂಜಾರಿ ಕೋಡಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ ಬಾರ್ಕೂರು, ಕೃಷ್ಣ ಪೂಜಾರಿ ಪಿ.ಕೋಡಿ ಕನ್ಯಾಣ, ಪ್ರಭಾವತಿ ಡಿ. ಬಿಲ್ಲವ ಕೋಟ, ಭಾರತಿ ಎಸ್.ಪೂಜಾರಿ ಕರಿಕಲ್ ಕಟ್ಟೆ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕೃಷ್ಣ ಉಪಸ್ಥಿತರಿದ್ದರು. ಸಂಘದ ಬಾರ್ಕೂರು ಶಾಖಾ ವ್ಯವಸ್ಥಾಪಕಿ ಶ್ರೀದೇವಿ ಕಲ್ಕೂರ ಪ್ರಾರ್ಥಿಸಿದರು. ಕೋಟ ಶಾಖೆಯ ವ್ಯವಸ್ಥಾಪಕ ದಿನೇಶ್ ಪೂಜಾರಿ ಬಾರ್ಕೂರು ಸ್ವಾಗತಿಸಿದರು. ಲೋಹಿತ್ ಜಿ.ಬಿ. ವಂದಿಸಿದರು. ಶಾಖಾ ವ್ಯವಸ್ಥಾಪಕರಾದ ಉದಯ ಪೂಜಾರಿ ಕೋಡಿ, ರಮೇಶ್ ಪೂಜಾರಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

ಶೇ.25 ಕ್ಷೇಮಾಭಿವೃದ್ಧಿ ನಿಧಿ

ಸಂಘ 8.50 ಕೋಟಿ ರೂ. ಸ್ಥಿರಾಸ್ತಿ ಮತ್ತು ಕಟ್ಟಡ, 5.10 ಕೋಟಿ ರೂ. ಚರಾಸ್ತಿ ಹೊಂದಿದ್ದು, ಕೋಟದಲ್ಲಿ ಕೇಂದ್ರ ಕಚೇರಿ ಸ್ವಂತ ಕಟ್ಟಡ 4 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆಗೊಂಡಿದ್ದು, ತಳ ಅಂತಸ್ತಿನ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ. ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸದಸ್ಯರ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ, ಉನ್ನತ ವ್ಯಾಸಂಗ ನಿಧಿಯಿಂದ ಧನಸಹಾಯ, ಸಂಘದ ಸದಸ್ಯರಿಗೆ ಸಾಮೂಹಿಕ ವಿಮೆ, ಮರಣ ನಿಧಿ, ಸದಸ್ಯರ ಸಹಾಯಕ ನಿಧಿ ಮೂಲಕ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಹಸ್ತ, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ 1 ಲಕ್ಷ ರೂ. ವೈಯಕ್ತಿಕ ಸಾಲ ಹಾಗೂ ಸ್ವಸಹಾಯ ಗುಂಪಿನ ಸಾಲ ಪಡೆದ ಸದಸ್ಯರು ಮೃತರಾದಲ್ಲಿ ಬಾಕಿ ಸಾಲದ ಮೊತ್ತದ ಶೇ.25ರಷ್ಟನ್ನು ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುತ್ತಿದೆ ಎಂದು ಜಗದೀಶ್ ಕೆಮ್ಮಣ್ಣು ತಿಳಿಸಿದರು.

Share This Article

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…