ಕೋಟ: ಏಕಾಗ್ರತೆಯಿಂದ ಗುರಿಯೆಡೆಗೆ ಪಯಣಿಸಿದರೆ ಯಾವುದೇ ಸಾಧನೆ ಸಾಧ್ಯವಾಗುತ್ತದೆ ಎಂದು ಶಾರದಾ ಕಾಲೇಜು ಬಸ್ರೂರು ಪ್ರಾಂಶುಪಾಲೆ ಚಂದ್ರಾವತಿ ಶೆಟ್ಟಿ ಹೇಳಿದರು.
ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಅಂಚೆ ಕೋಟೇಶ್ವರ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳ ಬಹುಮಾನಿತರ ಪಟ್ಟಿ ಇತಿಹಾಸ ವಿಭಾಗ ಮುಖ್ಯಸ್ಥ ಗಣೇಶ ಪೈ ಎಂ., ಸಾಂಸ್ಕೃತಿಕ ವಿಭಾಗದ ಬಹುಮಾನಿತರ ಪಟ್ಟಿ, ಚುನಾವಣಾ ಸಾಕ್ಷರತಾ ಸಂಘದ ಬಹುಮಾನಿತರ ಪಟ್ಟಿ ಮತ್ತು ವಿಶೇಷ ಸಾಧಕರ ಪಟ್ಟಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಭಾಗೀರಥಿ ನಾಯ್ಕ, ಕ್ರೀಡಾ ವಿಭಾಗದ ಬಹುಮಾನಿತರ ಪಟ್ಟಿ ದೈಹಿಕ ಶಿಕ್ಷಣ ನಿರ್ದೇಶಕ ಕಿರಣ ವಿಷ್ಣು ಪಟಗಾರ, ರೋವರ್ಸ್-ರೇಂಜರ್ಸ್ ವಿಭಾಗ ಬಹುಮಾನಿತರ ಪಟ್ಟಿ ವಾಣಿಜ್ಯಶಾಸ್ತ್ರ ವಿಭಾಗದ ಕಾರ್ತಿಕ್ ಪೈ ವಾಚಿಸಿದರು. ವಾರ್ಷಿಕ ವರದಿ ಐಕ್ಯೂಎಸಿ ಸಂಚಾಲಕ ನಾಗರಾಜ ಯು., ನಾಗರಾಜ ವೈದ್ಯ ಎಂ.ಪ್ರತಿಭಾ ದಿನಾಚರಣೆ ಬಹುಮಾನಿತರ ಪಟ್ಟಿ ವಾಚಿಸಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಉಪ ಕಾರ್ಯದರ್ಶಿ ಪವಿತ್ರಾ ಮರಾಠಿ ವಂದಿಸಿದರು. ಡಾ.ವೆಂಕಟರಾಮ ಭಟ್ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.