ಕೊಳಂಬೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

New Project (26)
Published on

ಗುರುಪುರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಂದಾವರ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ ಗ್ರಾಮದ ಮುರನಗರದಲ್ಲಿ ಮಳೆಯಿಂದ ಹಾನಿಯಾಗಿದ್ದ ಕದ್ರಿ-ಬೋಂದೆಲ್-ಏರೋಡ್ರಾಮ್ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಅವರ ವಿಶೇಷ ಮುತುವರ್ಜಿಯಲ್ಲಿ 1.10 ಕೋ.ರೂ ಅನುದಾನ ಬಿಡುಗಡೆಯಾಗಿದ್ದು, ಶನಿವಾರ ಶಾಸಕರು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಪಂಚಾಯಿತಿ ಅನುದಾನದಲ್ಲಿ ಸೌಹಾರ್ದನಗರ ಶಾಲಾ ಮೈದಾನದಲ್ಲಿ ಅಳವಡಿಸಲಾದ ಹೈಮಾಸ್ಟ್ ಉದ್ಘಾಟಿಸಿದ ಶಾಸಕರು, ಸೌಹಾರ್ದನಗರದಲ್ಲಿ 5.94 ಲಕ್ಷ ರೂ.ವೆಚ್ಚದ 2 ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದರು.

ಸೌಹಾರ್ದನಗರ ಗರಡಿ ಮನೆಗೆ ಗ್ರಾಮ ವಿಕಾಸ ಯೋಜನೆಯ 3.7 ಲಕ್ಷ ರೂ.ಅನುದಾನದಲ್ಲಿ ಬಿಡುಗಡೆಗೊಂಡ ವಿದ್ಯುತ್ ಉಪಕರಣ, ಶೀಟ್ ಮತ್ತು ಇತರ ಪರಿಕರ ಹಸ್ತಾಂತರಿಸಿದರು. ಕಂದಾವರ ಗ್ರಾಪಂ ಸದಸ್ಯರು, ಶಕ್ತಿ ಕೇಂದ್ರ ಅಧ್ಯಕ್ಷ ಮತ್ತು ಸದಸ್ಯರು, ಬಿಜೆಪಿ ಮಂಡಲ ಪ್ರಮುಖರು, ಬೂತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net