

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಉಭಯ ರಂಗಗಳ ಆಡಳಿತ ಕೇರಳವನ್ನು ಇಂದು ಅಭಿವೃದ್ಧಿಯಿಂದ ವಂಚಿತವನ್ನಾಗಿಸಿದೆ. ಅಭಿವೃದ್ಧಿ ಭರವಸೆಯೊಂದಿಗೆ ಅಧಿಕಾರಕ್ಕೇರಿದ್ದ ಎಡರಂಗ ಸರ್ಕಾರ ಇಂದು ಎಲ್ಲ ರಂಗಗಳಲ್ಲೂ ವಿಲವಾಗಿದ್ದು, ಸುಳ್ಳು ಭರವಸೆ ಮೂಲಕ ರಾಜ್ಯದ ಜನರನ್ನು ವಂಚಿಸಿದೆ. ರಾಜ್ಯದ ಜನತೆಗೆ ಬಿಜೆಪಿ ಏಕೈಕ ಆಶಾಕಿರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದರು.
ಕಾಸರಗೋಡಿನ ಆರ್.ಕೆ. ಮಾಲ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿಯ ‘ವಿಕಸಿತ ಕೇರಳ’ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್, ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲ ಕುಟ್ಟಿ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ರಾಜ್ಯ ಮಾಧ್ಯಮ ಪ್ರಭಾರಿ ಅನೂಪ್ ಆ್ಯಂಟನಿ, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಮಾಝಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯರಾದ ವಕೀಲ ಎಂ.ನಾರಾಯಣ ಭಟ್, ವಿ.ರವೀಂದ್ರನ್, ವಿ.ಬಾಲಕೃಷ್ಣ ಶೆಟ್ಟಿ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ರಂಜಿತ್, ಎ.ವೇಲಾಯುಧನ್, ಸವಿತಾ, ಸತೀಶ್ಚಂದ್ರ ಭಂಡಾರಿ, ಕರುಣಾಕರನ್, ಕೆ.ಕೆ.ನಾರಾಯಣನ್, ಎಂ.ಬಾಲರಾಜ್, ಎಂ.ಜನನಿ, ಎ.ಕೆ.ಕಯ್ಯರ್, ಮಣಿಕಂಠ ರೈ, ಮುರಳೀಧರ ಯಾದವ್, ಎಚ್.ಆರ್.ಸುಕನ್ಯಾ, ಎಂ.ಬಾಬುರಾಜ್, ಮನುಲಾಲ್ ಮೇಲತ್, ವೀಣಾ ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯಾ ಧ್ಯಕ್ಷರಿಗೆ ಸ್ವಾಗತ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್ ಅವರಿಗೆ ಸೋಮವಾರ ಸ್ವಾಗತ ನೀಡಲಾಯಿತು. ಕಾರ್ಯಕ್ರಮಕ್ಕೆ ಮೊದಲು ಕಾಸರಗೋಡು ಸಿಟಿ ಟವರ್‌ನಲ್ಲಿ ಕ್ಷೇತ್ರ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಪಾಲ್ಗೊಂಡರು. ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರನ್ನು ಹೊಸ ಬಸ್ ನಿಲ್ದಾಣ ಪ್ರದೇಶದಿಂದ ವಿಕಸಿತ ಕೇರಳ ಸಮಾವೇಶ ಆಯೋಜಿಸಿದ್ದ ಆರ್.ಕೆ. ಮಾಲ್ ಸಭಾಂಗಣಕ್ಕೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಪಹಲ್ಗಾಮ್ ಭಯೋತ್ಪಾದಕ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.