ಯೋಗವನದ ಪರಮಪೂಜ್ಯ ಶ್ರೀ ಕಪರ್ದಿ ಸಿದ್ದಲಿಂಗ ಮಹಾಸ್ವಾಮೀಜಿಯವರು ಲಿಂಗೈಕ್ಯ

Swamiji F
Published on

ಬೆಂಗಳೂರು: ಯೋಗವನ ಬೆಟ್ಟದ ಸ್ಥಾಪಕರು ಹಾಗೂ ಆಯುರ್ವೇದ ಪಂಡಿತರೂ ಆಗಿದ್ದ ಪರಮಪೂಜ್ಯ ಶ್ರೀ ಕಪರ್ದಿ ಸಿದ್ದಲಿಂಗ ಮಹಾಸ್ವಾಮೀಜಿಯವರು (75 ವರ್ಷ) ಇಂದು ಲಿಂಗೈಕ್ಯರಾದರು. ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪರಮಪೂಜ್ಯರ ಅಂತ್ಯಸಂಸ್ಕಾರ ಹಾಸನ ಜಿಲ್ಲೆ ಆಲೂರು ಪಟ್ಟಣದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ಬಸವತತ್ವ ಪ್ರಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಆಯುರ್ವೇದ-ಯೋಗ ಮೂಲಕ ಪ್ರಕೃತಿ ಸಹಜವಾಗಿ ಚಿಕಿತ್ಸೆ ನೀಡುವಂಥ ಯೋಗವನಗಳನ್ನು ಸಿದ್ದಲಿಂಗ ಸ್ವಾಮೀಜಿಯವರು ಸ್ಥಾಪಿಸಿದ್ದರು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಮಾತ್ರವಲ್ಲದೆ ಚಿತ್ರದುರ್ಗ ಹಾಗೂ ಕುಣಿಗಲ್​ನಲ್ಲೂ ಸ್ವಾಮೀಜಿ ಯೋಗವನಗಳನ್ನು ನಿರ್ಮಿಸಿದ್ದರು. ಆಶ್ರಮದಂಥ ಯೋಗವನ ಪರಿಸರದಲ್ಲಿ ಆಯುರ್ವೇದ, ಜಾನಪದ, ಗಿಡಮೂಲಿಕೆ ಹಾಗೂ ಪ್ರಕೃತಿ ಸಹಜವಾದ ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net