ದೇವಾಲಯ ಕಳವು ಆರೋಪಿಗಳ ಶೀಘ್ರ ಪತ್ತೆ : ಬಿಜೆಪಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಗ್ರಹ

Published on

ಕಾಸರಗೋಡು: ಮೀಂಜ ಪಂಚಾಯಿತಿಯ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಬಿಜೆಪಿ ಕೇರಳ ಘಟಕ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ. ಐತಿಹಾಸಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿ ದೇವಸ್ಥಾನದ ಸೊತ್ತುಗಳನ್ನು ದೋಚುವ ಸಂಚು ವ್ಯಾಪಕಗೊಂಡಿದೆ. ಹಿಂದು ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡಿ ಕೆಡಹುವ ಹುನ್ನಾರ ನಡೆಸಲಾಗುತ್ತಿದೆ. ಕೋಳ್ಯೂರು ದೇವಸ್ಥಾನ ಪರಿಸರ ಪ್ರದೇಶದಲ್ಲಿ ಇತ್ತೀಚೆಗೆ ಹಲವಾರು ಕಳವು ಪ್ರಕರಣಗಳು ನಡೆದಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಪೊಲೀಸರ ನಿರಂತರ ವೈಫಲ್ಯ, ಕಳ್ಳತನಕ್ಕೆ ಪ್ರೋತ್ಸಾಹ ಲಭಿಸಿದಂತಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net