ಕುದ್ಮಾರಿನಲ್ಲಿ ರಸ್ತೆಗುರುಳಿದ ಮರ : ವಾಹನ ಸಂಚಾರಕ್ಕೆ ಅಡಚಣೆ

mara
ಕುದ್ಮಾರು ಗ್ರಾಮದ ದೈಪಿಲ ದ್ವಾರದ ಬಳಿ ಬೃಹತ್ ಮರ ಭಾರಿ ಗಾಳಿ ಮಳೆಗೆ ರಸ್ತೆಗೆ ಬಿದ್ದಿದೆ.
Published on

ಕಡಬ: ಕುದ್ಮಾರು ಗ್ರಾಮದ ದೈಪಿಲ ದ್ವಾರದ ಬಳಿ ಬೃಹತ್ ಮರ ಭಾರಿ ಗಾಳಿ ಮಳೆಗೆ ರಸ್ತೆಗೆ ಬಿದ್ದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ದೈಪಿಲದಿಂದ ನಾಣಿಲ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಸವಾರರು ಸುತ್ತು ಬಳಸಿ ತೆರಳಿದರು. ವಿದ್ಯಾರ್ಥಿಗಳು, ಶಾಲಾ ವಾಹನದವರಿಗೆ ತೊಂದರೆಯಾಯಿತು. ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿದೆ. ಮರ ತೆರವು ಕಾರ್ಯ ಸ್ಥಳೀಯರಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net