ಸುಳ್ಯ: ವಕೀಲರ ಮನೆಯ ಹಟ್ಟಿಯಲ್ಲಿ ರಾತ್ರಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಕಳ್ಳರು ಕದ್ದೊಯ್ದ ಘಟನೆ ಸಂಪಾಜೆ ಗ್ರಾಮದ ಚೌಕಿಯಲ್ಲಿ ನಡೆದಿದೆ.
ಸಂಪಾಜೆ ವಕೀಲ ಪುಷ್ಪರಾಜ್ ಗಾಂಭೀರ ಅವರ ಮನೆ ಹಟ್ಟಿಯಲಿದ್ದ ಎರಡು ದನಗಳು ಕಳವಾಗಿದ್ದು, ಬೆಳಗ್ಗೆ ಎದ್ದು ನೋಡಿದಾಗ ದನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅವರು ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಗೆ ದೂರು ನೀಡಿದ್ದಾರೆ.
ಸಂಪಾಜೆ ಗ್ರಾಮದಲ್ಲಿ ದಿನೇ ದಿನೇ ದನ ಕಳ್ಳತನವಾಗುತ್ತಿದ್ದು ಕಪ್ಪು ಬಣ್ಣದ ಸ್ಕಾರ್ಪಿಯೊ ವಾಹನದ ಮೇಲೆ ಅನುಮಾನವಿದೆ. ಹೊರ ಠಾಣೆ ಸಮೀಪದಲ್ಲಿ ಘಟನೆ ನಡೆಯುತ್ತಿದ್ದು, ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಇದ್ದರೂ ದನ ಕಳ್ಳರ ಪತ್ತೆ ಹಚ್ಚಲಾಗದ ಇಲಾಖೆ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.