ಅಬಕಾರಿ ನೌಕರರಿಗೆ ವೇತನ ವಿಳಂಬ: ಕುಟುಂಬ ನಿರ್ವಹಣೆಗೆ ಪರದಾಟ

excise
Published on

ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಸಂಪನ್ಮೂಲ ತಂದುಕೊಡುವ ಅಬಕಾರಿ ಇಲಾಖೆಯ ಸಿಬ್ಬಂದಿಗೆ ಪದೇಪದೆ ವೇತನ ವಿಳಂಬವಾಗುತ್ತಿದೆ.

2024ರ ಸೆ.6ರಂದು ನಿಯಂತ್ರಾಣಾಧಿಕಾರಿಗಳು (ಸಿಒ) ಹಂತದಲ್ಲಿ ವೇತನ ಮಾಡಲು ಆದೇಶಿಸಿದ್ದರೂ ಪ್ರತಿ ತಿಂಗಳು ವೇತನ ವಿಳಂಬದಿಂದಾಗಿ ಆರ್ಥಿಕ ನಿರ್ವಹಣೆಗೆ ಇಲಾಖೆ ಅಧಿಕಾರಿಗಳು, ನೌಕರರು ತೊಂದರೆ ಅನುಭವಿಸುತ್ತಿದ್ದಾರೆ.

2024ರ ಅಕ್ಟೋಬರ್​​ನಿಂದ ಜಿಲ್ಲಾ ಹಂತದಲ್ಲಿ ವೇತನ ಆಗುತ್ತಿದೆ. ಆದರೆ, ನಿಗದಿತ ಸಮಯದಲ್ಲಿ ಸಂಬಳವಾಗದ ಕಾರಣ  ಬಾಡಿಗೆ ಕಟ್ಟಲು, ಸಾಲದ ಕಂತು ಪಾವತಿ ಸೇರಿ ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಹಾಗಾಗಿ, ಈ ಸಮಸ್ಯೆ ಬಗೆಹರಿಸಲು ಈ ಮೊದಲು ಇರುವ ಹಾಗೇ ಕೆಲಸ ಮಾಡುತ್ತಿರುವ ಕಚೇರಿಯಲ್ಲಿಯೇ ವೇತನ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು.  ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕೆಂದು ಇಲಾಖೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net