ಡಾಬಾ ಬಂತು ಊಟ ಮಾಡ್ತೀಯಾ? ಎಂದು ಗೋಳಾಡಿ ಕಣ್ಣೀರಿಟ್ಟಾಗ ಎದ್ದುಕೂತ ಮೃತವ್ಯಕ್ತಿ.. haveri

haveriman
Published on

ಹಾವೇರಿ: ( haveri ) ICUನಲ್ಲಿ  ಚಿಕತ್ಸೆ ಪಡೆಯುತ್ತಿದ್ದ ವ್ಯಕ್ತಿ ಬದುಕಿಲ್ಲ ಎಂದು ಡಾಕ್ಟರ್ ಹೇಳಿದ್ರು. ದುಃಖದಲ್ಲಿ ಮನೆಗೆ ವಾಪಸ್ ಬರುವಾಗ ಒಂದು ಡಾಬಾ ಅಂಗಡಿ ಮುಂದೆ ಮಲಗಿದ್ದವನ ಉಸಿರು ಮರಳಿ ಬಂದಿದೆ.  ಈ  ವಿಚಿತ್ರ ಘಟನೆ ಹಾವೇರಿಯ ಬಂಕಾಪುರ ಗ್ರಾಮದಲ್ಲಿ ನಡೆದಿದೆ.

 ನಡೆದಿದ್ದೇನು?:

ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಗ್ರಾಮದ 45 ವರ್ಷದ ಬಿಷ್ಟಪ್ಪ ಗುಡಿಮನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. 3-4 ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಬಿಷ್ಟಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ನೀಡಿದ ಧಾರವಾಡದ ಖಾಸಗಿ ಆಸ್ಪತ್ರೆಯ ವೈದ್ಯರು ಬಿಷ್ಟಪ್ಪ ಗುಡಿಮನಿ ಸತ್ತಿದ್ದಾನೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.

ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬ್ಯುಲೆನ್ಸ್‌ನಲ್ಲಿ ಮೃತದೇಹವನ್ನು ಬಂಕಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಊರಿಗೆ ವಾಪಸ್ ಬರುತ್ತಿದ್ದ ದಾರಿಯಲ್ಲಿ ಆತನ ಇಷ್ಟವಾದ ಡಾಬಾ ಹೋಟೆಲ್ ಬಂದಿದೆ. ಬಿಷ್ಟಪ್ಪನ ಕಿರಿಯ ಮಗ ಅಪ್ಪಾ ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿ ಕಣ್ಣೀರಿಟ್ಟಿದ್ದಾನೆ.ನಿನ್ನ ಇಷ್ಟವಾದ ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಕೇಳಿದಾಗ ಮೃತಪಟ್ಟ ವ್ಯಕ್ತಿ ಉಸಿರು ಬಿಟ್ಟಿದ್ದಾನೆ. ಎಲ್ಲರಿಗೂ ಆಶ್ಚರ್ಯವಾಗಿ ಸಮೀಪದ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಈಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ನೇಹಿತರು, ಮನೆಯವರು ವಾಟ್ಸ್‌ ಆ್ಯಪ್ ಗ್ರೂಪ್‌ನಲ್ಲಿ ಓಂ ಶಾಂತಿ ಎಂದು ಸಹ ಹಾಕಿದ್ದರು. ಇದೀಗ ಸತ್ತಿದ್ದವನು ಮತ್ತೆ ಬದುಕಿದ್ದಕ್ಕೆ ಸ್ಥಳೀಯರು ಇದು ದೇವರ ಪವಾಡ ಎನ್ನುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net