ಆನೆಗುಂದಿ ಸಂಸ್ಥಾನಕ್ಕೆ ಪೊಂಗನೂರು ತಳಿಯ ಹಸುಗಳ ಸಮರ್ಪಣೆ

punganoor
ಆನೆಗುಂದಿ ಸಂಸ್ಥಾನಕ್ಕೆ ಉಚ್ಚಿಲ ವಿಶ್ವನಾಥ ಆಚಾರ್ಯ ಹಾಗೂ ಚಂದ್ರಕಲಾ ದಂಪತಿ ಗೊವುಗಳನ್ನು ಸಮರ್ಪಿಸಿದರು
Published on

ಪಡುಬಿದ್ರಿ: ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದಲ್ಲಿ ನಡೆಯುತ್ತಿರುವ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಪಡುಬಿದ್ರಿಯ ಉಚ್ಚಿಲ ವಿಶ್ವನಾಥ ಆಚಾರ್ಯ ಹಾಗೂ ಚಂದ್ರಕಲಾ ವಿ.ಆಚಾರ್ಯ ದಂಪತಿ ಪೊಂಗನೂರು ತಳಿಯ ಹಸುಗಳನ್ನು ಸಂಸ್ಥಾನಕ್ಕೆ ಸಮರ್ಪಿಸಿದರು.

ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಶ್ರೀಗಳು ಗೋವುಗಳಿಗೆ ಶಂಕರ ಹಾಗೂ ಗೌರಿ ಎಂದು ನಾಮಕರಣ ಮಾಡಿ ಸರಸ್ವತಿ ಗೋಶಾಲೆಗೆ ಸೇರ್ಪಡೆಗೊಳಿಸಿದರು. ಆನೆಗುಂದಿ ಪ್ರತಿಷ್ಠಾನ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಅಸೆಟ್ ಅಧ್ಯಕ್ಷ ಬಿ ಸೂರ್ಯಕುಮಾರ್ ಹಳೆಯಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net