ಹೆಬ್ರಿ: ಭತ್ತದ ಕೃಷಿ ಉಳಿಸಿದರೆ ನಾವು ಎಲ್ಲವನ್ನು ಉಳಿಸಿದಂತೆ. ಯುವಕರ ಈ ಸಾಧನೆ ಮೆಚ್ಚುವಂಥದ್ದು. ಗ್ರಾಮಾಭಿವೃದ್ಧಿ ಯೋಜನೆ ಅದ್ಭುತ ಕಾರ್ಯಕ್ರಮ, ಯಾಂತ್ರೀಕರಣದಿಂದ ಮಾತ್ರ ಭತ್ತವನ್ನು ಮುಂದಿನ ದಿವಸದಲ್ಲಿ ಉಳಿಸಬಹುದು ಎಂದು ಅಜೆಕಾರು ಜನ ಜನಜಾಗೃತಿ ವೇದಿಕೆ ಸದಸ್ಯ ನಂದಕುಮಾರ ಹೆಗ್ಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಜೆಕಾರು ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇರಿ ಹಡಿಲು ಬಿದ್ದ ಮೂರು ಎಕರೆ ಭೂಮಿ ನಾಟಿ ಮಾಡುವ ಕಾರ್ಯಕ್ರಮ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ವಿಪತ್ತಿನ ಸದಸ್ಯರಿಗೆ ಸಸಿ ಮಡಿ ವಿತರಿಸಿದರು. ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಯಶೋದಾ ಶೆಟ್ಟಿ, ಜಗದೀಶ್ ಶೆಟ್ಟಿ, ಗ್ರಾಪಂ ಸದಸ್ಯ ರಾಜೇಶ್ ಶೆಟ್ಟಿ, ಹಿರಿಯರಾದ ಭೋಜ ಮಡಿವಾಳ, ಒಕ್ಕೂಟ ಅಧ್ಯಕ್ಷ ಪ್ರವೀಣ್ ಮಡಿವಾಳ, ಮೇಲ್ವಿಚಾರಕ ಉದಯ ಟಿ.ದೇವಾಡಿಗ, ಕೃಷಿ ಮೇಲ್ವಿಚಾರಕ ಉಮೇಶ್, ಸೇವಾ ಪ್ರತಿನಿಧಿ ವಿಜಯ ಕಾಮತ್, ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ಉಪಸ್ಥಿತರಿದ್ದರು.