

ಶಿರ್ವ: ಶಿರ್ವ ನಡಿಬೆಟ್ಟು ಬಳಿ ನಾಗರಪಂಚಮಿಗೆಂದು ಸೀಯಾಳ ಕೊಯ್ಯಲು ಹೋದ ಶಿರ್ವದ ನಡಿಬೆಟ್ಟು ಸಮೀಪದ ಪನಿಯಾರ ಮನೆಯ ಕೆಲಸಗಾರ ಸುರೇಶ್ ಶೆಟ್ಟಿ(68) ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭ ತೋಟದಲ್ಲಿ ಕಬ್ಬಿಣದ ಸಲಾಕೆ ಉಪಯೋಗಿಸಿ ತೆಂಗಿನ ಮರದಿಂದ ಸೀಯಾಳ ತೆಗೆಯುತ್ತಿದ್ದಾಗ ಘಟನೆ ಸಂಭವಿಸಿದೆ. ತೋಟದಲ್ಲಿ ಹಾದು ಹೋಗಿರುವ ಹೈಟೆನ್ಷನ್ ತಂತಿಗೆ ಸುರೇಶ ಅವರ ಕೈಯಲ್ಲಿದ್ದ ಕಬ್ಬಿಣದ ಸಲಾಕೆ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಶಿರ್ವ ಠಾಣಾ ಪೊಲೀಸರು ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದು, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.