ಮಾರ್ಗದರ್ಶನ ಕೊರತೆಯಿಂದ ತಪ್ಪು ದಾರಿ: ನಿವೃತ್ತ ಮುಖ್ಯಶಿಕ್ಷಕ ದಿನಕರ

swasthya
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ನಡೆಯಿತು
Published on

ಗಂಗೊಳ್ಳಿ: ಬೆಳವಣಿಗೆ ಹಂತದಲ್ಲಿ ಸೂಕ್ತ ಶಿಕ್ಷಣ ಪಡೆಯುವ ಮೂಲಕ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಹಿರಿಯರು ಕಿರಿಯರಿಗೆ ದಾರಿದೀಪವಾಗಿರಬೇಕು. ಮಾರ್ಗದರ್ಶನದ ಕೊರತೆಯಿಂದ ವಯಸ್ಸಿನಲ್ಲಿ ಮಕ್ಕಳು ದಾರಿತಪ್ಪುವ ಸಾಧ್ಯತೆ ಇದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್. ಶೆಟ್ಟಿ ಹೇಳಿದರು.

ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ತಾಲೂಕು ಘಟಕ ಹಾಗೂ ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಯು.ಆರ್.ರಾವ್ ಸೈನ್ಸ್ ಕ್ಲಬ್ ವತಿಯಿಂದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲ ಶರಣಕುಮಾರ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕ ಸುಬ್ರಹ್ಮಣ್ಯ, ರೂರಲ್ ಟೀಮ್ ಲೀಡರ್ ಗಣೇಶ್, ಜನಜಾಗೃತಿ ವೇದಿಕೆ ಸದಸ್ಯ ಜಗದೀಶ್, ದೇವೇಂದ್ರ ಉಪಸ್ಥಿತರಿದ್ದರು. ಅನುಷ್ಕಾ ಯು.ಎಚ್.ಸ್ವಾಗತಿಸಿದರು. ಸಚೇತ್ ಎ.ಪಿ. ವಂದಿಸಿದರು. ವೇದಿಕಾ ನೇತ್ರಾ ಗೌಡುರ್ ಕಾರ್ಯಕ್ರಮ ನಿರೂಪಿಸಿದರು.

ಮಾದಕ ವಸ್ತುಗಳ ಸೇವನೆಯೊಂದಿಗೆ ಮಾದಕ ದ್ರವ್ಯಗಳ ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ದುಶ್ಚಟಗಳೇ ಸಮಾಜಘಾತುಕ ಕೃತ್ಯಗಳಿಗೂ ಕಾರಣವಾಗುತ್ತವೆ. ಹೆಚ್ಚು ಹೆಚ್ಚು ಹಿತನುಡಿಗಳನ್ನು ಕೇಳಬೇಕು, ಜತೆಗೆ ಜೀವನದಲ್ಲಿ ಅಳವಡಿಸಬೇಕು.ದಿನಕರ ಆರ್. ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net