ಪಾರ್ಕ್​ನ ಖಾಲಿ ಜಾಗದಲ್ಲಿ ಕಂಡುಬಂತು ಶವ; ರಾತ್ರಿ ಮನೆಯಿಂದ ಹೊರಗೆ ಹೋಗಿದ್ದವ ಬೆಳಗ್ಗೆ ಹೆಣವಾಗಿ ಪತ್ತೆ!

murder pic
Published on

ಮೈಸೂರು: ಬೆಳ್ಳಂಬೆಳಗ್ಗೆ ಪಾರ್ಕ್​ನ ಖಾಲಿ ಜಾಗದಲ್ಲಿ ಶವವೊಂದನ್ನು ಕಂಡು ಜನರು ಬೆಚ್ಚಿಬೀಳುವಂತಾಗಿತ್ತು. ಮೈಸೂರಿನ ಉದಯಗಿರಿಯ ಉದ್ಯಾನವೊಂದರಲ್ಲಿ ಈ ಮೃತದೇಹ ಪತ್ತೆಯಾಗಿದ್ದು, ಮೃತಪಟ್ಟವನನ್ನು ಹಮೀದ್ (40) ಎಂದು ಗುರುತಿಸಲಾಗಿದೆ.

ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಮೀದ್, ಈ ಹಿಂದೆ ಬೇರೊಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದು, ಹಳೆಯ ದ್ವೇಷಕ್ಕೆ ಕೊಲೆಗೀಡಾಗಿರುವ ಶಂಕೆಯೂ ವ್ಯಕ್ತವಾಗಿದೆ. ಸ್ಥಳಕ್ಕೆ ಉದಯಗಿರಿ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಹಮೀದ್ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ವಾಪಸ್ ಬಂದಿರಲಿಲ್ಲ. ಆದರೆ ಇಂದು ಬೆಳಗ್ಗೆ ಪಾರ್ಕ್​ನ ಖಾಲಿ ಜಾಗದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಹಮೀದ್ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net