ಆರ್​​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿಗಳಿಬ್ಬರಿಗೆ ಆಹ್ವಾನ!; ಟೀಕಿಸೋ ಮೊದಲು ಶಿಬಿರಕ್ಕೆ ಬಂದು ವಿಷ್ಯ ತಿಳ್ಕೊಳಿ ಅಂತ ಪತ್ರ..

Untitled-1
Published on

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಅವರಿಬ್ಬರಿಗೂ ಈಗ ಆರ್​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಕೋರಿ ಆಹ್ವಾನ ಕಳಿಸಲಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಅ.17ರಿಂದ ಏಳು ದಿನಗಳ ಕಾಲ ಆರ್​ಎಸ್​ಎಸ್​ ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಪಾಲ್ಗೊಂಡು ಆರ್​ಎಸ್​ಎಸ್​ನ ಮಹತ್ವ ತಿಳಿದುಕೊಳ್ಳಿ. ಆರ್​ಎಸ್​ಎಸ್​ ಶಿಬಿರದಲ್ಲಿ ಸಂಸ್ಕಾರದ ಬಗ್ಗೆ ಹೇಳಿಕೊಡಲಾಗುತ್ತದೆ. ಏಳು ದಿನಗಳಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ಗಟ್ಟಿಗೊಳಿಸಿ ಈ ದೇಶಕ್ಕೆ ಹಾಗೂ ಸಮಾಜಕ್ಕೆ ನಿಮ್ಮನ್ನು ಆರ್​ಎಸ್​ಎಸ್​ ಅರ್ಪಣೆ ಮಾಡುತ್ತದೆ ಎಂದು ಪತ್ರಮುಖೇನ ಕರೆಯಲಾಗಿದೆ.

ಶಿಬಿರಕ್ಕೆ ಬರುವಾಗ ತಟ್ಟೆ, ಲೋಟ,‌‌‌ ಬೆಡ್​ಶೀಟ್​, ಜಮಕಾನ ಹಾಗೂ ಎರಡು ಜೊತೆ ಬಟ್ಟೆ ತೆಗೆದುಕೊಂಡು ಬನ್ನಿ. ಅದರಲ್ಲೂ ಆರ್​ಎಸ್​ಎಸ್​ ಗಣವೇಷದಲ್ಲಿ ಶಿಬಿರದಲ್ಲಿ ಪಾಲ್ಗೊಂಡು, ಬಳಿಕ ಆರ್​ಎಸ್​ಎಸ್​ ಬಗ್ಗೆ ಮಾತನಾಡಿ ಎಂದು ಆರ್​ಎಸ್​ಎಸ್​ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಇಬ್ಬರೂ ಮಾಜಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net