

ಬ್ರಹ್ಮಾವರ: ಉಡುಪಿ ಜಿಲ್ಲಾದ್ಯಂತ ಇರುವ ಡಿಸಿ ಮನ್ನಾ ಭೂಮಿಯನ್ನು ಭೂ ರಹಿತ ದಲಿತರಿಗೆ ನೀಡಬೇಕು. ಅಕ್ರಮ-ಸಕ್ರಮ ಸಮಿತಿಗಳು ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯಲ್ಲಿ ಶೇ.50ರಷ್ಟು ದಲಿತ ಸಮುದಾಯಕ್ಕೆ ನೀಡಬೇಕು ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿ ಮೈಸೂರು ವಿಭಾಗೀಯ ಸಂಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.
ಬ್ರಹ್ಮಾವರ ತಾಲೂಕು ಸೌಧದ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಮಿತಿ ಮುಖಂಡರಾದ ಶ್ಯಾಮಸುಂದರ್ ತೆಕ್ಕಟ್ಟೆ, ಶ್ರೀನಿವಾಸ ವಡ್ಡರ್ಸೆ, ಮಂಜುನಾಥ್ ಬಾಳ್ಕುದ್ರು, ಕುಸುಮಾ ಹಂಗಾರಕಟ್ಟೆ, ನಿವೃತ್ತ ಉಪತಹಸೀಲ್ದಾರ್ ಅಣ್ಣಪ್ಪ, ಎಸ್.ನಾರಾಯಣ್, ಹರಿಶ್ಚಂದ್ರ ಬಿರ್ತಿ, ಶಾಂತರಾಜ್ ಆರೂರು ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು. ಬಳಿಕ ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರಿಗೆ ಮನವಿ ನೀಡಲಾಯಿತು.