ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳೊಂದಿಗೆ ಡಿಸಿ ಮಾತುಕತೆ

bmr (1)
Published on

ಬ್ರಹ್ಮಾವರ: ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಭೇಟಿ ನೀಡಿ ನಿಲಯದ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ಈ ಹಿಂದೆ ಸ್ವತಃ ಶಿಕ್ಷಕಿಯಾಗಿದ್ದ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನಿಲಯದ ವಿದ್ಯಾರ್ಥಿಗಳೊಂದಿಗೆ ಕೆಲವು ಹೊತ್ತು ಕಾಲ ಕಳೆದು ಶಿಕ್ಷಣ ಮತ್ತು ದಿನಚರಿ ಕುರಿತು ವಿಚಾರಿಸಿದರು.

ಬಳಿಕ ನಿಲಯದ ಆಹಾರ ತಯಾರಿಕೆ ಮತ್ತು ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿ ಅಲ್ಲಿನ ಮೇಲ್ವಿಚಾರಕರು ಮತ್ತು ಅಡುಗೆ ಸಿಬ್ಬಂದಿಯೊಂದಿಗೆ ಕೆಲಹೊತ್ತು ವಿಚಾರವಿನಿಮಯ ಮಾಡಿ ನಿಲಯದ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೇಲ್ವಿಚಾರಕಿ ಹೆಸರಾಂತಿ, ಅಡುಗೆ ಸಿಬ್ಬಂದಿ ಭಾರತಿ, ಕಲ್ಪನಾ ಮತ್ತು ರತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net