VIDEO| ವಿದೇಶಿ ಮಹಿಳೆಗೆ ಭವಿಷ್ಯ ಹೇಳಿದ ಜ್ಯೋತಿಷಿಗೆ ಲಕ್ಷಾಂತರ ರೂ. ಪಂಗನಾಮ!

Astrologer
Published on

ದಾವಣಗೆರೆ: ವಿದೇಶಿಯರಿಗೆ ಭವಿಷ್ಯ ಹೇಳಲು ಹೋಗಿ ಜ್ಯೋತಿಷಿಯೊಬ್ಬ ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಅಣಜಿಯಲ್ಲಿ ಸೋಮವಾರ ನಡೆದಿದೆ.

ಬಿ.ಎಂ. ವಿರೂಪಾಕ್ಷಯ್ಯ ಎಂಬುವರು ವಿದೇಶಿಯರಿಗೆ ಫೇಸ್​ಬುಕ್​ ಮುಖಾಂತರ ಭವಿಷ್ಯ ಹೇಳಿ ಸುಮಾರು 9.20 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ವಿರೂಪಾಕ್ಷಯ್ಯ ಅವರು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ನಿವಾಸಿ. ಅಣಜಿ ಗ್ರಾಮದದಲ್ಲಿ ಗುತ್ತಿಗೆ ಆಧಾರಿತ ಪೋಸ್ಟ್‌ಮ್ಯಾನ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಪ್ರವೃತ್ತಿಯಾಗಿ ಜ್ಯೋತಿಷ್ಯ ಹೇಳುತ್ತಿದ್ದರು.

ಎರಡು ವರ್ಷದ ಹಿಂದೆ ಫೇಸ್​ಬುಕ್‌ನ ಅಸ್ಟ್ರಾಲಜಿ ಗೈಡೆನ್ಸ್‌‌ ಗ್ರೂಪ್‌ಗೆ ಸೇರಿದ್ದರು. ಇದರ ಮುಖಾಂತರ ಅಮೆರಿಕದ ಕ್ಯಾಲಿಫೋರ್ನಿಯಾದ ಮಹಿಳೆಗೆ ಡಿವೋರ್ಸ್‌ ವಿಚಾರವಾಗಿ ಜ್ಯೋತಿಷ್ಯ ಹೇಳಿದ್ದರು. ಅವರ ಭವಿಷ್ಯ ಯಶಸ್ವಿಯಾಯ್ತ ಅಂತ ವಿದೇಶಿ ಮಹಿಳೆ ಕರೆ ಮಾಡಿ ತಿಳಿಸಿದರು. ಅದಕ್ಕೆ ಪ್ರತಿಯಾಗಿ 20 ಸಾವಿರ ಡಾಲರ್‌ ದಕ್ಷಿಣೆ ನೀಡೋದಾಗಿಯೂ ನಂಬಿಸಿದ್ದರು.

ಹಣ ಹಾಕಲು ವಿದೇಶಿ ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿಸುವಂತೆ ಮಹಿಳೆ ಜ್ಯೋತಿಷಿಗೆ ಸಲಹೆ ನೀಡಿದ್ದರು. ಅದನ್ನು ನಂಬಿದ ಜ್ಯೋತಿಷಿ ತನ್ನ ಬ್ಯಾಂಕ್​ ಖಾತೆಯ ವಿವರವನ್ನು ನೀಡಿದರು. ಬಳಿಕ ವಿದೇಶಿ ಕ್ಲಿಯರೆನ್ಸ್‌ ಹೆಸರಲ್ಲಿ ಹಂತ ಹಂತವಾಗಿ ಜ್ಯೋತಿಷಿ ಬಳಿ ಲಕ್ಷಾಂತರ ಹಣ ಕಟ್ಟಿಸಿಕೊಂಡುಬ ವಂಚಿಸಲಾಗಿದೆ.

ಇದೀಗ ಹಣ ಕಳೆದುಕೊಂಡಿರುವ ಜ್ಯೋತಿಷಿ ಮೋಸ ಮಾಡಿದ ವಿದೇಶಿ ವ್ಯಕ್ತಿಗಳ ವಿರುದ್ಧ ದಾವಣಗೆರೆ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net