

ಪುತ್ತೂರು ಗ್ರಾಮಾಂತರ: ಮಳೆಯಿಂದ ಮುಂಡೂರು ಗ್ರಾಮದ ಕೆರೆಮನೆ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ಸೋಲಾರ್ ಶೆಡ್, ಗ್ರೀನ್ ಹೌಸ್ ಹಾಗೂ ಕೃಷಿ ಹಾನಿಗೊಂಡಿದೆ.
ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆರೆಮನೆ ಲೋಕಪ್ಪ ಗೌಡರ ಮನೆಯ ಬಳಿ ಅಡಿಕೆ ಒಣಗಿಸಲು ನಿರ್ಮಿಸಿದ್ದ ಸೋಲಾರ್ ಶೆಡ್ ಹಾಗೂ ಪಕ್ಕದಲ್ಲೇ ಇದ್ದ ಗ್ರೀನ್ ಹೌಸ್ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಸೋಲಾರ್ ಶೆಡ್ ಸಂಪೂರ್ಣವಾಗಿ ನಾಶಗೊಂಡಿದ್ದು, ಆ ಭಾಗದಲ್ಲಿ ಮಣ್ಣು ರಾಶಿ ಬಿದ್ದಿದೆ. ಗ್ರೀನ್ ಹೌಸ್‌ಗೂ ಹಾನಿಯಾಗಿದೆ. ಅಲ್ಲದೇ ಮಣ್ಣು ಕುಸಿದ ಪರಿಣಾಮವಾಗಿ ಆ ಭಾಗದಲ್ಲಿದ್ದ 30 ಅಡಕೆ ಮರ, 10 ರಬ್ಬರ್ ಮರ, 3 ತೆಂಗಿನ ಮರಗಳು ನೆಲಕ್ಕುರುಳಿವೆ.