ವಿದ್ಯುತ್ ಕಂಬ ಧರೆಗೆ

mescom
ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಶಾಲೆಯಲ್ಲಿ ಮರ ವಿದ್ಯುತ್ ತಂತಿ ಮೇಲೆ ಬಿದ್ದಿರುವುದು.
Published on

ಕೊಕ್ಕಡ: ಭಾನುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಕೊಕ್ಕಡ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರಳಿವೆ. ರೆಖ್ಯದಲ್ಲಿ ಎಚ್.ಟಿ.ಲೈನ್‌ನ 3 ಕಂಬ, ಪಾರ್ಪಿಕಲ್ಲಿನಲ್ಲಿ ಎಚ್.ಟಿ.ಲೈನ್ ನ 1ಕಂಬ, ಹಾರ ಪಡ್ಡಡ್ಕದಲ್ಲಿ ಎಲ್‌ಟಿ ಲೈನ್‌ನ 1ಕಂಬ,ಉಪ್ಪಾರಪಳಿಕೆಯಲ್ಲಿ 1 ಕಂಬ ಧರೆಗುರುಳಿದೆ. ಪರಿಣಾಮವಾಗಿ ಈ ಭಾಗದಲ್ಲಿ ಭಾನುವಾರ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಹಾನಿಯಾದ ಪ್ರದೇಶಕ್ಕೆ ಕೊಕ್ಕಡ ಮೆಸ್ಕಾಂ ಶಾಖೆಯ ಜೆಇ ಮಂಜುನಾಥ್, ಪವರ್ ಮ್ಯಾನ್‌ಗಳಾದ ಪ್ರಕಾಶ್ ಜಿ, ಉಮೇಶ್ ಐನಪುರ್, ಅಶೋಕ್ ರಾಥೋಡ್, ಸಂತೋಷ್ ಗಾಜಿ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಅವರಿಗೆ ಸ್ಥಳೀಯರು ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net