ಲಾಯಿಲದಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿತ

tadegode
ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಲಾಯಿಲ ಮುಂಡೂರು ಸಡಕ್ ರಸ್ತೆಯ ಬದಿ ಕಟ್ಟಿದ್ದ ತಡೆಗೋಡೆ ಮಳೆಗೆ ಕುಸಿದಿರುವುದು.
Published on

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರಿ ಮಳೆಯಾಗುತಿದ್ದು, ಲಾಯಿಲ ಬಳಿ ರಸ್ತೆ ಬದಿಯ ತಡೆಗೋಡೆ ಕುಸಿತಗೊಂಡು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಲಾಯಿಲ-ಮುಂಡೂರು ಸಡಕ್ ರಸ್ತೆಯ ಬದಿ ಕಟ್ಟಿದ್ದ ತಡೆಗೋಡೆ ಮಳೆಗೆ ಕುಸಿದಿದೆ. ಅದೃಷ್ಟವಶಾತ್ ಈ ವೇಳೆ ವಾಹನ ಹಾಗೂ ಜನರ ಸಂಚಾರ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ಸ್ಥಳೀಯರು ರಸ್ತೆಗೆ ಬಿದಿದ್ದ ಕಲ್ಲನ್ನು ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net