ಎಚ್.ವಿ.ರಾಘವೇಂದ್ರ ವಕೀಲರ ಸಂಘದ ನೂತನ ಅಧ್ಯಕ್ಷ

mng--9 June H V Ragavendra rao
Published on

ಮಂಗಳೂರು: ಮಂಗಳೂರು ವಕೀಲರ ಸಂಘದ 2024-26 ರ ಪದಾಧಿಕಾರಿಗಳ ಆಯ್ಕೆ, ಚುನಾವಣೆ ಮೂಲಕ ಶುಕ್ರವಾರ ಮಂಗಳೂರು ವಕೀಲರ ಸಂಘದ ಕಛೇರಿಯ ಆವರಣದಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಎಚ್. ವಿ ರಾಘವೇಂದ್ರ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಎಚ್, ಜತೆ ಕಾರ್ಯದರ್ಶಿಯಾಗಿ ಜ್ಯೋತಿ ಮತ್ತು ಖಜಾಂಚಿಯಾಗಿ ಗಿರೀಶ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಶಾ ದೀಪ ಪೈ ಎಚ್., ಆಶಾ ನಾಯಕ್, ದೇವದಾಸ್ ರಾವ್, ಪುರುಶೋತ್ತಮ ಭಟ್ ಎಂ., ಚಂದ್ರಹಾಸ ಕೊಟ್ಟಾರಿ, ಕುಶಾಲಪ್ಪ ಕೆ., ಪ್ರವೀಣ್ ಕುಮಾರ್ ಅಧ್ಯಪಾಡಿ, ಸುಮನಾ ಶರಣ್, ಆರತಿ, ಹರೀಶ್ ಕೆ., ರವಿಕುಮಾರ್ ವಿ., ರವಿರಾಜ್, ಗಿರೀಶ, ಕೃಷ್ಣಪ್ರಸಾದ್ ಕೆ.ವಿ., ಮಹಮ್ಮದ್ ಅಸ್ಗರ್ ಹಾಗೂ ಅಕ್ಷತಾ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಮಂಗಳೂರು ವಕೀಲರ ಸಂಘದ ಚುನಾವಣಾ ಅಧಿಕಾರಿ ಹಾಗೂ ಹಿರಿಯ ವಕೀಲ ಡೆರಿಲ್ ಅಂದ್ರಾದೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net