ದಡ್ಡಲಕಾಡು ಶಾಲೆ ದತ್ತು ಒಪ್ಪಂದ ನವೀಕರಣ ವಿಳಂಬ: ಸರ್ಕಾರದ ಗಮನ ಸೆಳೆದ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿ

rajesh naik
Published on

ಬಂಟ್ವಾಳ: ತಾಲೂಕಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿ ವಿಧಾನಮಂಡಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.

ದಡ್ಡಲಕಾಡುವಿನಲ್ಲಿ 1976ರಲ್ಲಿ ಆರಂಭವಾದ ಏಕೋಪಧ್ಯಾಯ ಶಾಲೆ ಹಂತ-ಹಂತವಾಗಿ ಬೆಳೆದು 2015ಕ್ಕೆ ತಲುಪುವಾಗ ವಿದ್ಯಾರ್ಥಿಗಳ ಕೊರತೆ ಎದುರಾಗಿ ಮುಚ್ಚುವ ಸ್ಥಿತಿಗೆ ಬಂದಿತ್ತು. ಆಗ ಅಲ್ಲಿನ ಹಳೇ ವಿದ್ಯಾರ್ಥಿಗಳು ಶಾಲೆ ಉಳಿಸುವ ನಿಟ್ಟಿನಲ್ಲಿ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿ ಶಾಲೆಯನ್ನು ದತ್ತು ಪಡೆದು 2 ಕೋಟಿ ರೂ. ವೆಚ್ಚದಲ್ಲಿ ಆರಂಭಿಕ ಹಂತದಲ್ಲಿ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ. ದಾನಿಗಳ ನೆರವು ಹಾಗೂ ಸಿಎಸ್‌ಆರ್ ಫಂಡ್ ಪಡೆದು ಶಾಲೆಗಾಗಿ ಸುಮಾರು 4 ಕೋಟಿ ರೂ. ಖರ್ಚು ಮಾಡಿದ್ದು ಇಂದು 1040 ವಿದ್ಯಾರ್ಥಿಗಳಿದ್ದು ರಾಜ್ಯಕ್ಕೆ ಮಾದರಿಯಾಗಿದೆ.

ಖಾಸಗಿ ಶಾಲೆಯನ್ನು ಮೀರಿಸುವಂತೆ ಈ ಸರ್ಕಾರಿ ಶಾಲೆ ಬೆಳೆದಿದ್ದು 8 ಶಾಲಾ ಬಸ್ ಇಲ್ಲಿವೆ. ದತ್ತು ಅವಧಿ ಮುಗಿದಿದ್ದು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಅಡ್ಡಿಪಡಿಸುತ್ತಿವೆ. ಶಾಲೆಯ ಅಭಿವೃದ್ಧಿಗೆ ಅನುದಾನ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ. ಆದರೆ ಶಾಲೆಯ ಹಳೇ ವಿದ್ಯಾರ್ಥಿಗಳು ಅದನ್ನು ಅಭಿವೃದ್ಧಿಪಡಿಸುವಾಗ ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಈ ವಿಚಾರವಾಗಿ ಸದನ ಸಮಿತಿ ರಚಿಸಿ ಅಧ್ಯಯನಕ್ಕೆ ಶಾಲೆಗೆ ಕಳುಹಿಸಿಕೊಡಬೇಕು ಎಂದು ರಾಜೇಶ್ ನಾಕ್ ಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net