ಎಚ್ಚರಿಕೆ, ಎಚ್ಚರಿಕೆ.. ಸಮುದ್ರದ ಹವಾಮಾನ ಕೆಟ್ಟುಹೋಗಿದೆ; ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

Feature
Published on

ಮಂಗಳೂರು: ರಾಜ್ಯದಲ್ಲಿ ಮೇ 16ರಂದು ಚಂಡಮಾರುತ ಬೀಸಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದ್ದರೂ, ಮಂಗಳೂರಿನಲ್ಲಿ ಮೂರು ದಿನಗಳ ಮುನ್ನವೇ ಎಚ್ಚರಿಕೆ ನೀಡಲಾಗುತ್ತಿದೆ. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿರುವವರನ್ನು ಕರೆದು ಬೇಗ ದಡ ಸೇರಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.

ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಅರಬ್ಬೀ ಸಮುದ್ರದಲ್ಲಿ ಘೋಷಣೆ ಮಾಡುವ ಮೂಲಕ ಮೀನುಗಾರರ ರಕ್ಷಣೆಗಾಗಿ ಸೂಚನೆ ನೀಡಲಾರಂಭಿಸಿದ್ದಾರೆ. 'ಮೀನುಗಾರರೇ, ಮೀನುಗಾರರೇ.. ಸಮುದ್ರದ ಹವಾಮಾನ ಕೆಟ್ಟುಹೋಗಿದೆ, ಬೇಗ ಬೇಗ ದಡ ಸೇರಿಕೊಳ್ಳಿ..' ಎಂಬುದಾಗಿ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಎಲ್ಲರೂ ಆದಷ್ಟು ಬೇಗ ಹತ್ತಿರದ ಬಂದರನ್ನು ಸೇರಿಕೊಳ್ಳಿ ಎಂಬುದಾಗಿ ಸಂದೇಶ ರವಾನಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ. ವಾಯುಭಾರತ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮೇ 16ರಂದು ರಾಜ್ಯದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಮೂನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net