

ಬೆಂಗಳೂರು: ನಕಲಿ ಶಾಪಿಂಗ್ ವೆಬ್ ಸೈಟ್ ನಲ್ಲಿ ವಂಚನೆಗೆ ಒಳಗಾದವರು ದೂರು ನೀಡಲು ಸೈಬರಾಬಾದ್ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಾಗಿ ಕನ್ನಡಿಗರು ವಂಚನೆಗೆ ಒಳಗಾಗಿರುವ ಮಾಹಿತಿ ಮೇರೆಗೆ ಸೈಬರಾಬಾದ್ ಪೊಲೀಸರು ಕನ್ನಡದಲ್ಲಿ ಟ್ವಿಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ನಕಲಿ ವೆಬ್ ಸೈಟ್ http://www.modwayfurniture.in ಮತ್ತು http://www.zopnow.in ನಿಂದ ಸಾವಿರಾರು ಮಂದಿಗೆ ಉತ್ತರ ಪ್ರದೇಶ ಮೂಲದ ಬನಶಂಕರಿ ನಿವಾಸಿ ರಿಷಭ್ ಉಪಾಧ್ಯಾಯ ಅಲಿಯಾಸ್ ಚಂದನ್ ವಂಚನೆ ಮಾಡಿದ್ದ. ಸಾಫ್ಟ್‌ವೇರ್ ಇಂಜಿನಿಯರ್ ಈ ಕುರಿತು ಆರೋಪಿಯ ವಿರುದ್ಧ ದೂರು ನೀಡಿದ್ದರು. ತನಿಖೆ ಕೈಗೊಂಡ ತೆಲಂಗಾಣದ ಸೈಬರಾಬಾದ್ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಿದ್ದರು.
ಈ ವೇಳೆ ಆರೋಪಿ ಬ್ಯಾಂಕ್ ಖಾತೆಯಲ್ಲಿ 40 ಲಕ್ಷ ಜಪ್ತಿ ಮಾಡಿದ್ದರು. ಆದರೆ, ಸೈಬರಾಬಾದ್ ನಲ್ಲಿ ಕೇವಲ 9 ಪ್ರಕರಣ ದಾಖಲಾಗಿದ್ದವು. ವಂಚನೆ ಮೊತ್ತವು ಕಡಿಮೆ. ಅದಕ್ಕಾಗಿ ಈ ನಕಲಿ ವೆಬ್ ಸೈಟ್ ನಲ್ಲಿ ಶಾಪಿಂಗ್ ಮಾಡಲು ಹೋಗಿ ವಂಚನೆಗೆ ಒಳಗಾಗಿದ್ದರೇ ಅಂತವರು ದೂರು ನೀಡಿದರೆ ಮೋಸವಾಗಿರುವ ಹಣವನ್ನು ಕಾನೂನು ಬದ್ಧವಾಗಿ ವಾಪಸ್ ಕೊಡುವುದಾಗಿ ಸೈಬರಾಬಾದ್ ಪೊಲೀಸರು ಭರವಸೆ ನೀಡಿದ್ದಾರೆ.