More

    ಮಂಡ್ಯದಲ್ಲಿ ನಿಖಿಲ್​ -ಅಭಿ ನಡುವೆ ಜಿದ್ದಾಜಿದ್ದಿ? ಸ್ಫೋಟಕ ಸುಳಿವು ಕೊಟ್ರು ಜೂ.ರೆಬೆಲ್ ಸ್ಟಾರ್

    ಮಂಡ್ಯ: ಮಂಡ್ಯ ರಾಜಕೀಯಕ್ಕೆ ದಿ. ಅಂಬರೀಶ್​ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ರಾಜಕೀಯಕ್ಕೆ ಪ್ರವೇಶ ಮಾಡ್ತಾರಂತೆ. ಈ ಬಗ್ಗೆ ಸ್ವತಃ ಜೂ.ರೆಬೆಲ್ ಸ್ಟಾರ್ ಅವರೇ ಸುಳಿವು ಕೊಟ್ಟಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳುಗನಹಳ್ಳಿಯಲ್ಲಿ ಮಾತನಾಡಿದ ಅಭಿಷೇಕ್​, ಭವಿಷ್ಯದಲ್ಲಿ ಏನೇನು ಬದಲಾವಣೆಯಾಗುತ್ತೋ ಯಾರಿಗೆ ಗೊತ್ತು? ಮದ್ದೂರಿಗಾಗಲಿ, ಮಂಡ್ಯಕ್ಕಾಗಲಿ ಜಿಲ್ಲೆಯಲ್ಲಿರೋ 7‌ ಕ್ಷೇತ್ರಕ್ಕೂ ಒಳ್ಳೆಯ ಶಾಸಕರು ಸಿಗಬೇಕು. ಅವರು ಯಾರ ಮನೆಯವರು, ನನಗೆ ಬೇಕಾದವರು ಅಂತಲ್ಲ. ಒಳ್ಳೆಯ ವ್ಯಕ್ತಿಗಳು ಸಿಗಬೇಕು ಎಂದ ಅಭಿಷೇಕ್, ಜನ ಬಯಸಿದ್ರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.

    ಮಾತಿನ ಮಧ್ಯೆ ಕಳೆದ ವಾರ ಸಿಎಂ ಬದಲಾಗತ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಎಂದು ಅಭಿ ಪ್ರಶ್ನಿಸಿದ್ರು. ಈ ವೇಳೆ ಹೌದಣ್ಣ ಗೊತ್ತಿರಲಿಲ್ಲ, ಬದಲಾಗ್ತಾರೆ ಅಂತ ಗೊತ್ತಿದ್ರೂನು ಬೊಮ್ಮಾಯಿ ಆಗ್ತಾರೆ ಅಂತ ಗೊತ್ತಿರಲಿಲ್ಲ ಅಣ್ಣ ಎನ್ನುತ್ತ ಅಭಿಮಾನಿಯೊಬ್ಬ ಹಾಸ್ಯ ಚಟಾಕಿ ಹಾರಿಸಿದ.

    ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಜನ ಬಯಸಿದ್ರೆ ಸ್ಪರ್ಧೆ ಎಂದಿದ್ದ ಸುಮಲತಾ, ನಂತರ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಈಗ ಪುತ್ರ ಅಭಿಷೇಕ್ ಅಂಬರೀಶ್ ಬಾಯಲ್ಲೂ ಅದೇ ಮಾತು ಹೊರಹೊಮ್ಮಿದೆ. ಆ ಮೂಲಕ ಮಂಡ್ಯ ರಾಜಕೀಯ ಅಖಾಡ ಮುಂಬರುವ ದಿನಗಳಲ್ಲಿ ಮತ್ತಷ್ಟು ರಂಗೇರುವ ಲಕ್ಷಣ ಗೋಚರಿಸಿದೆ. ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರ ಮೊಮ್ಮಗ ನಿಖಿಲ್​ ಕುಮಾರಸ್ವಾಮಿ ಮಂಡ್ಯ ಮೇಲೆ ಕಣ್ಣಿಟ್ಟಿದ್ದು, ಸ್ನೇಹಿತರ ನಡುವೆಯೇ ಸ್ಪರ್ಧೆ ಏರ್ಪಟ್ಟರೂ ಅಚ್ಚರಿ ಇಲ್ಲ.

    ಜೆಡಿಎಸ್​ ಪರ ಅನಂತಕುಮಾರ್ ಪುತ್ರಿ ಬ್ಯಾಟಿಂಗ್​: ರಾಜ್ಯ ರಾಜಕೀಯದಲ್ಲಿ ಸಂಚಲನ

    ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

    ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

    ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts