ಧಾರ್ಮಿಕ ಸಂಸ್ಕಾರದೊಂದಿಗೆ ದೇವಳ ಸಂದರ್ಶನ : ಎಂ.ಎಚ್.ಅರವಿಂದ ಪೂಂಜ ಹೇಳಿಕೆ

5-1
Published on

ಮೂಲ್ಕಿ: ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಕಲಿಸುವ ಜತೆಗೆ ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಮಕ್ಕಳೊಂದಿಗೆ ದೇವಸ್ಥಾನ ಸಂದರ್ಶಿಸುವ ಕಾರ್ಯ ಕೈಗೊಂಡಲ್ಲಿ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ ಹೇಳಿದರು.

ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ವತಿಯಿಂದ 41ನೇ ವರ್ಷದ ಮಹಾಶಿವರಾತ್ರಿ-2025 ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಧಕರ ನೆಲೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ನಾರಾಯಣ ರೈ ಕುಬೆವೂರು, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ನಿತಿನ್ ಮೂಲ್ಕಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯರಾಜ್ ಹಾಗೂ ಸಂಸ್ಥೆಯ ಹಿರಿಯ ಸದಸ್ಯ ದಯಾನಂದ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರಾದ ಯಶ್ವಿತ್ ಡಿ.ಕಾಂಚನ್ ಚಿತ್ರಾಪು, ಹರ್ಷಿತಾ ಎಸ್.ಎಸ್., ಪ್ರಜ್ಞಾ ಎನ್., ಎಸ್ ವಿಟಿ, ಆಶ್ರಯ ಎಲ್.ಸುವರ್ಣ, ದಿಶಾ ಆರ್.ಶೆಟ್ಟಿ, ಸಮೀಕ್ಷಾ ಎ.ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿವೇತನ ವಿತರಿಸಲಾಯಿತು.

ಮುಂಬೈ ಭಾರತ್ ಕೋ- ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್, ಉದ್ಯಮಿ ಅರುಣ್ ಕುಮಾರ್ ಶರ್ಮಾ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಗ್ರಾಮ ಸಮಿತಿ ಗೌರವಾಧ್ಯಕ್ಷ ಗುಣನಾಥ ಜಿ.ಬಂಗೇರ, ನಿವೃತ್ತ ಅರಣ್ಯಾಧಿಕಾರಿ ರಮಾನಂದ ಎಸ್.ರಾವ್ ಕಾರ್ನಾಡ್, ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಮೊಕ್ತೇಸರ ರಾಘವೇಂದ್ರ ಟಿ., ಯುವಕ ವೃಂದದ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ., ಕಾರ್ಯದರ್ಶಿ ವಸಂತ್ ಕೋಟ್ಯಾನ್, ಕೋಶಾಧಿಕಾರಿ ಶಂಕರ ಪಡುಬೈಲು, ಮಹಿಳಾ ಮಂಡಳಿ ಉಪಾಧ್ಯಕ್ಷೆ ರೇವತಿ ಎನ್.ಪೂಜಾರಿ, ಕಾರ್ಯದರ್ಶಿ ಗೀತಾ ಹಿಮಕರ ಸಾಲ್ಯಾನ್, ಸುರೇಶ್ ರಾವ್, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ಉಪಸ್ಥಿತರಿದ್ದರು. ದಿನೇಶ್ ಕೋಲ್ನಾಡ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net