ಮಂಗಳೂರು ಸ್ಕೂಟರ್‌ನಲ್ಲಿಟ್ಟಿದ್ದ 2 ಲಕ್ಷ ರೂ. ಕಳವು

FIR-2
Published on

ಮಂಗಳೂರು: ನಗರದ ರಥಬೀದಿಯ ವೆಂಕಟರಮಣ ಆರ್ಕೆಡ್ ಬಳಿಯ ಬ್ಯಾಕೊಂದರ ಬಳಿ ನಿಲ್ಲಿಸಿದ್ದ ಸ್ಕೂಟರ್‌ನ ಬಾಕ್ಸ್‌ನಲ್ಲಿ ಇರಿಸಿದ್ದ 2 ಲಕ್ಷ ರೂ. ಕಳವಾಗಿದೆ.

ದೂರುದಾರರು ಮಾ.3ರಂದು ಬೆಳಗ್ಗೆ 10 ಗಂಟೆಗೆ ಸ್ಕೂಟರ್ ನಿಲ್ಲಿಸಿ ಬ್ಯಾಂಕ್‌ಗೆ ಹೋಗಿದ್ದು ವಾಪಾಸು ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಸ್ಕೂಟರ್ ಇರಲಿಲ್ಲ. ಆಸುಪಾಸಿನಲ್ಲಿ ಹುಡುಕಿದಾಗ ರಾಘವೇಂದ್ರ ಮಠಕ್ಕೆ ಹೋಗುವ ಒಳಗಿನ ರಸ್ತೆ ಬದಿಯಲ್ಲಿ ಸ್ಕೂಟರ್ ಕಂಡುಬಂದಿದೆ. ಸ್ಕೂಟರನ್ನು ಪರಿಶೀಲಿಸಿದಾಗ ಸೀಟಿನಡಿಯ ಬಾಕ್ಸ್‌ನ ಲಾಕ್ ಮುರಿದು ಅದರಲ್ಲಿ ಇದ್ದ ಎರಡು ಹಣದ ಚೀಲಗಳನ್ನು ಕಳವು ಮಾಡಲಾಗಿತ್ತು. ಚೀಲದಲ್ಲಿ ಸುಮಾರು 2 ಲಕ್ಷ ರೂ.ಗೂ ಅಧಿಕ ಹಣವಿತ್ತು. ಸ್ಕೂಟರ್‌ನಿಂದ ಹಣ ಕದ್ದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net