ಯುವ ಪೀಳಿಗೆಗೆ ಸಂಸ್ಕೃತಿ ಅರಿವು: ಬಿ.ಗಣೇಶ್ ಕಿಣಿ ಬೆಳ್ವೆ ಹೇಳಿಕೆ ; ಹ್ವಾಯ್ ಕೆಸರಂಗ್ ಒಂದಿನ ಆಡ್ವ ಕಾರ್ಯಕ್ರಮ

cultur
ಹೊನ್ಕಲ್ಲುವಿನಲ್ಲಿ ಹ್ವಾಯ್ ಕೆಸರಂಗ್ ಒಂದಿನ ಆಡ್ವ ಕಾರ್ಯಕ್ರಮವನ್ನು ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಭಾನುವಾರ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ನಮ್ಮ ನೆಲ ಜಲ ಕಲೆ ಸಂಸ್ಕೃತಿ, ಭಾಷೆ, ಸಂಪ್ರದಾಯ, ಆಚರಣೆ, ಗ್ರಾಮೀಣ ಬದುಕಿನ ಜೀವನದ ಸೊಗಡು, ಕೃಷಿ ಬದುಕಿನ ಶ್ರಮದ ಜೀವನ, ಆಹಾರ ವೈವಿಧ್ಯಗಳನ್ನು ಉಳಿಸಿ ಬೆಳೆಸಲು ಹಾಗೂ ಯುವ ಪೀಳಿಗೆಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಬೇಕು ಎಂದು ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಹೇಳಿದರು.

ಬೆಳ್ವೆ ಗೆಳೆಯರ ಬಳಗದ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಹೊನ್ಕಲ್ಲು ಶ್ರೀಮೂಕಾಂಬಿಕಾ ಕಲ್ಯಾಣಧಾಮದ ಬಳಿ ಮೈರ್‌ಗದ್ದೆಯಲ್ಲಿ ಹ್ವಾಯ್ ಕೆಸರಂಗ್ ಒಂದಿನ ಆಡ್ವ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ ಬೆಳ್ವೆ, ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್, ಕುಂದಾಪುರ ವಿಭಾಗ ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ, ಅಲ್ಬಾಡಿ ಗಸ್ತು ಪ್ರಭಾರ ಉಪ ವಲಯಾರಣ್ಯಾಧಿಕಾರಿ ಗಣೇಶ್ ದೇವಾಡಿಗ, ಹೊನ್ಕಲ್ಲು ಶ್ರೀಮೂಕಾಂಬಿಕಾ ಕಲ್ಯಾಣಧಾಮದ ಮಾಲೀಕ ರಾಧಕೃಷ್ಣ ಮಯ್ಯ ಹೊನ್ಕಲು, ಬೆಳ್ವೆ ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ನಾಯ್ಕ, ಪ್ರಗತಿಪರ ಕೃಷಿಕ ಕೃಷ್ಣ ನಾಯ್ಕ ತೆಂಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸೂರ‌್ಗೋಳಿ, ಹಿಲಿಯಾಣ ಶ್ರೀಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ವೈ ಕರುಣಾಕರ ಶೆಟ್ಟಿ ಯರುಕೋಣೆ, ಬೆಳ್ವೆ ಗ್ರಾಪಂ ನಿಕಟ ಪೂವಾಧ್ಯಕ್ಷ, ಹಾಲಿ ಸದಸ್ಯ ಎಸ್.ಚಂದ್ರಶೇಖರ್ ಶೆಟ್ಟಿ ಸೂರ‌್ಗೋಳಿ, ಮಾಜಿ ಸದಸ್ಯ ಪ್ರವೀಣ್ ಲೋಭೋ ಗುಮ್ಮೋಲ, ಹಾಲಿ ಸದಸ್ಯ ಪ್ರತ್ವೀಜ್ ಶೆಟ್ಟಿ ಹೊನ್ಕಲ್ಲು, ಅಲ್ಬಾಡಿ ಶ್ರೀವನದುರ್ಗಾ ಟ್ರಾನ್ಸ್‌ಪೋರ್ಟ್ ಉದ್ಯಮಿ ಚಂದ್ರ ಪೂಜಾರಿ ಅಲ್ಬಾಡಿ, ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಬಿ.ಕಿಶನ್ ರಾಜ್ ಶೆಟ್ಟಿ, ಹಾಲಾಡಿ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ, ಆಶಾ ಪೂಜಾರಿ ಬೆಳ್ವೆ, ಬೆಳ್ವೆ ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ತೋಠೆಕಾರ್ ಅಲ್ಬಾಡಿ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಪೂಜಾರಿ ಅಲ್ಬಾಡಿ ಸ್ವಾಗತಿಸಿದರು. ಮಧುಕರ ಬೆಳ್ವೆ, ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಲೋಬೋ ಗುಮ್ಮೋಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net