ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಆರ್​ಪಿಎಫ್​​ ಯೋಧನಿಗೆ ತವರೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ವಿದಾಯ

yodha
Published on

ವಿಜಯನಗರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಆರ್​ಪಿಎಫ್​​ ಯೋಧ ಶ್ರೀನಿವಾಸನ್ ಅವರ ಮೃತದೇಹವನ್ನು ಅದ್ಧೂರಿ ಮೆರವಣಿಗೆ ಮೂಲಕ ಸರ್ಕಾರಿ ಸಕಲ ಗೌರವಗಳೊಂದಿಗೆ ಮಂಗಳವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹೆಮ್ಮೆಯ ವೀರಯೋಧ ಕಮಲಾಪುರದ ನಿವಾಸಿ ಶ್ರೀನಿವಾಸನ್ (53) ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಮೃತಪಟ್ಟಿದ್ದರು.

ದೆಹಲಿಯಲ್ಲಿ ಕುಟುಂಬ ನೆಲೆಸಿರುವ ಹಿನ್ನೆಲೆಯಲ್ಲಿ ಛತ್ತಿಸಗಡದಿಂದ ದೆಹಲಿಗೆ ರಜೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ ಬೈಕ್ ಮೇಲೆ ಹೋಗೋವಾಗ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು.
.
ಹುಟ್ಟೂರಾದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರಕ್ಕೆ ಅವರ ಮೃತದೇಹವನ್ನು ಮಂಗಳವಾರ ಕರೆತರಲಾಯಿತು. ಈ ವೇಳೆ ಯೋಧನಿಗೆ ಗೌರವ ಸಲ್ಲಿಸಲು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು.

ತ್ರಿವರ್ಣ ಧ್ವಜದೊಂದಿಗೆ, ವೀರ ಘೋಷಣೆಗಳನ್ನು ಹಾಕುತ್ತಾ ಐದು ಕಿಮೀ ವರೆಗೂ ಮೆರವಣಿಗೆ ಮಾಡಲಾಯಿತು. ನಂತರ ಅಂತಿಮ ವಿಧಿ ವಿಧಾನ ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net