More

    ಹಿಂದಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ: ನಟ ಮಹೇಶ್​ ಬಾಬು

    ಹೈದರಾಬಾದ್​: ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಭಾರೀ ಖ್ಯಾತಿ ಗಳಿಸುತ್ತಿವೆ. ಈ ನಡುವೆ ದಕ್ಷಿಣದ ಹೀರೋಗಳಿಗೂ ಭಾರೀ ಬೇಡಿಕೆ ಇದೆ.

    ಹಾಗಾಗಿ ದಕ್ಷಿಣದ ನಾಯಕನಟರಿಗೆ ಬಾಲಿವುಡ್​ನಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಇದಕ್ಕೆ ಕೆಲ ನಟರು ಆಸಕ್ತಿ ತೋರಿಸಿದರೆ, ಮತ್ತೆ ಕೆಲ ನಟರು ನಮಗೆ ಅದರ ಅಗತ್ಯವಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಇನ್ನು ಬಾಲಿವುಡ್​ನಲ್ಲಿ ಅವಕಾಶ ಸಿಕ್ಕರೆ ಸಾಕು ನಾವು ಎಲ್ಲವೂ ಗೆದ್ದಂತೆ ಎಂದುಕೊಳ್ಳುವವರೂ ಇದ್ದಾರೆ. ಆದರೆ ಈ ಸಾಲಿನಲ್ಲಿ ತಮ್ಮದೇ ಭಾಷೆಯ ಸಿನಿಮಾಗಳ ಮೇಲೆ ಪ್ರೀತಿ ಇಟ್ಟಿರುವ ಕೆಲ ನಟರು ಮಾತ್ರ ಬಾಲಿವುಡ್​ ಅಗತ್ಯವಿಲ್ಲ ಎಂದೇ ಹೇಳುತ್ತಾರೆ. ಈ ಸಾಲಿನಲ್ಲಿ ತೆಲುಗು ನಟ ಮಹೇಶ್​ ಬಾಬು ಕೂಡ ಸೇರಿದ್ದಾರೆ. ತೆಲುಗು ಸಿನಿಮಾ ಮಾತ್ರವೇ ಸಾಕು ಬೇರೆ ಸಿನಿಮಾ ಅಗತ್ಯವಿಲ್ಲ ಎಂದಿರುವ ಅವರು, ಹಿಂದಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಹೇಳಿರುವ ಅವರು, ನನಗೆ ಸಾಕಷ್ಟು ಹಿಂದಿ ಸಿನಿಮಾದಲ್ಲಿ ನಟಿಸಲು ಆಫರ್​ಗಳು ಬಂದಿವೆ. ನನಗೆ ಇಷ್ಟವಿಲ್ಲ. ನೀವು ನನಗೆ ಅಹಂಕಾರ ಎಂದುಕೊಳ್ಳಬಹುದು, ಅದರಲ್ಲಿ ನಟಿಸಿ ನನ್ನ ಸಮಯ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

    ನಾನು ಒಂದೇ ಹೇಳಿಕೆಯಲ್ಲಿ ಬದ್ಧನಾಗಿದ್ದೇನೆ. ನನಗೆ ತೆಲುಗು ಚಿತ್ರ ಒಂದೇ ಸಾಕು,  ತೆಲುಗು ಭಾಷೆಯೊಂದಿಗೆ ಬಿಡಿಸಲಾರದ ನಂಟಿದೆ. ನಾನು ಇನ್ನೂ ಬೆಳೆಯಲು ನನ್ನ ಭಾಷೆ, ಜನರೇ ಸಾಕು ಎಂದು ತಮ್ಮ ಮಾತೃಭಾಷಾಭಿಮಾನವನ್ನು ಮೆರೆದಿದ್ದಾರೆ. (ಏಜೆನ್ಸೀಸ್​)

    ಟ್ರೋಲ್​​ ಆಯ್ತು ಆಲಿಯಾ ಭಟ್​ ಬಟ್ಟೆ: ಈ “ವರ್ಷದ ಕಳಪೆ ಫ್ಯಾಷನ್”​ ಅಂದ್ರು ನೆಟ್ಟಿಗರು

    ಮಗುವಿಗಾಗಿ ಮೊಬೈಲ್​ ಟವರ್ ಮೇಲಿಂದ ಹಾರಿದ ಮಹಿಳೆಯ ಪ್ರಾಣ ಉಳಿಸಲು ಪೊಲೀಸರು ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts